IND VS SL 2nd ODI : ಕೆ.ಎಲ್.ರಾಹುಲ್ ಅರ್ಧಶತಕ ,ಭಾರತಕ್ಕೆ 4 ವಿಕೆಟ್ ಗಳ ಸರಣಿ ಗೆಲುವು….!

ಕೋಲ್ಕತಾ (ಜ.12) :  

ಶ್ರೀಲಂಕಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಭಾರತಕ್ಕೆ 216 ರನ್ ಟಾರ್ಗೆಟ್ ನೀಡಿತು. ಈ ಸುಲಭ ಮೊತ್ತ ಭಾರತಕ್ಕೆ ಆರಂಭದಲ್ಲೇ ಆತಂಕ ತಂದಿತ್ತು. ಕಾರಣ ಚೇಸಿಂಗ್ ವೇಳೆ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ಕೆಎಲ್ ರಾಹುಲ್ ಕೆಚ್ಚೆದೆಯ ಹೋರಾಟ ನೀಡುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು. 43.2 ಓವರ್‌ಗಳಲ್ಲಿ ಭಾರತ ಟಾರ್ಗೆಟ್ ಚೇಸ್ ಮಾಡಿತು. 2ನೇ ಏಕದಿನ ಪಂದ್ಯದಲ್ಲಿ ಭಾರತ ವಿಕೆಟ್ 4 ಗೆಲುವು ದಾಖಲಿಸಿತು.

ಶ್ರೀಲಂಕಾ ತಂಡವನ್ನು 215 ರನ್‌ಗೆ 36.2 ಓವರ್ ನಲ್ಲಿ ಆಲೌಟ್ ಮಾಡಿದ ಟೀಂ ಇಂಡಿಯಾ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡುವ ಭರವಸೆಯಲ್ಲಿಟ್ಟು . ಆದರೆ ಚೆಸಿಂಗ್ ಅಷ್ಟು ಸುಲಭವಾಗಿರಲಿಲ್ಲ ಕಾರಣ 33 ರನ್‌ಗಳಿಸುವಷ್ಟರಲ್ಲೇ ಭಾರತ ನಾಯಕ ರೋಹಿತ್ ಶರ್ಮಾರ ಮೊದಲ ವಿಕೆಟ್ ಕಳೆದುಕೊಂಡಿತು. . ಇದರ ಬೆನ್ನಲ್ಲೇ ಶುಬಮನ್ ಗಿಲ್ ಕೂಡ ಪೆವಿಲಿಯನ್ ಸೇರಿದರು. ಗಿಲ್ 21 ರನ್ ಸಿಡಿಸಿ ನಿರ್ಗಮಿಸಿದರು.

41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡರೂ ಭಾರತ ಆತಂಕ ಎದುರಿಸಲಿಲ್ಲ. ಕಾರಣ ,ಇತ್ತ ಈ ಟಾರ್ಗೆಟ್ ಚೇಸ್ ಮಾಡಬಲ್ಲ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದ್ದಾರೆ ಎಂದು ಅಭಿಮಾನಿಗಳು ಭರವಸೆ ಇಂದ ಕಾಯುತ್ತಿದ್ದರು ಆದರೆ ಲಹಿರು ಅವರ ಕಾಯುವಿಕೆಗೆ ಅಂತ್ಯ ಹಾಡಿದರು ವಿರಾಟ್ ಇವರ ಬೌಲಿಂಗ್ ನಲ್ಲಿ ಬೋಲ್ಡ್ ಆದರು, ಕೇವಲ 4 ರನ್ ಸಿಡಿಸಿ ಔಟಾಗುತ್ತಿದ್ದಂತೆ ಭಾರತದ ಚಿತ್ರಣ ಬದಲಾಯಿತು.

ಕೆಎಲ್ ರಾಹುಲ್ ತಾವೇ ಸ್ಟ್ರೈಕ್ ಹೆಚ್ಚು ಬಳಸಿಕೊಂಡು ,ಶ್ರೀ ಲಂಕಾ ತಂಡಕ್ಕೆ ತಡೆ ಗೋಡೆಯಂತೆ ನಿಂತು, ಭಾರತವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಇತ್ತ ಕುಲ್ದೀಪ ಯಾದವ್ ಕೂಡ ಉತ್ತಮ ಸಾಥ್ ನೀಡಿದರು. ಕುಲ್ದೀಪ್ ಯಾದವ್ ಕೊನೆಗೆ ಬೌಂಡರಿ ಸಿಡಿಸುವ ಮೂಲಕ ಭಾರತಕ್ಕೆ 4 ವಿಕೆಟ್ ಗಳ ಗೆಲುವಿನ ಹಾದಿ ತೋರಿಸಿದರು. ಕೆಎಲ್ ರಾಹುಲ್ ಅಜೇಯ 64 ರನ್ ಗಳಿಸಿದರು. ಕುಲ್ದೀಪ್ ಯಾದವ್ ಅಜೇಯ 10 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 43. 2ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಇನ್ನೂ 40 ಬಾಲ್ ಇರುವಾಗಲೇ ಗೆಲುವು ದಾಖಲಿಸಿತು.

ಮೊದಲನೇ ಏಕದಿನ ಪಂದ್ಯ ಗೆದ್ದ ಭಾರತ ಈಗ 2ನೇ ಏಕದಿನ ಪಂದ್ಯದಲ್ಲೂ ಗೆಲುವು ಕಾಣುವ ಮೂಲಕ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿ ಗೆದ್ದುಕೊಂಡಿತು.

ಪಾಂಡ್ಯ 36, ಅಯ್ಯರ್ 28, ಗಿಲ್, ಅಕ್ಷರ್ ತಲಾ 21, ರೋಹಿತ್ 17, ಕೊಹ್ಲಿ 4 ರನ್ ಗಳಿಸಿದರು. ಲಹಿರು, ಚಮಿಕ ತಲಾ 2 ವಿಕೆಟ್ ಪಡೆದರು.

 

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button