ಒಳ ಮೀಸಲಾತಿಗಾಗಿ ದಲಿತ ಸಂಘಟನೆಗಳಿಂದ ಪ್ರತಿಭಟನೆ.
ಚಿತ್ರದುರ್ಗ ಅ.17
ಜಿಲ್ಲೆಯ ಜಿಲ್ಲಾಧಿಕಾರಿಗಳ ವೃತ್ತದಲ್ಲಿ ಚಿತ್ರದುರ್ಗ ಜಿಲ್ಲೆಯ ಮಾದಿಗ ಮಹಾ ಒಕ್ಕೂಟ ಸಂಘಟ ನೆ ವತಿಯಿಂದ ಒಳ ಮೀಸಲಾತಿ ಜಾರಿ ಮಾಡುವಂತೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಸುಪ್ರೀಂ ಕೋರ್ಟ್ ಆದೇಶದ ಅನ್ವಯದಂತೆ ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಹೋಬಳಿ ತಾಲೂಕುಗಳ ವತಿಯಿಂದ ದಲಿತ ಮುಖಂಡರು ಮಹಿಳೆಯರು ಕಾರ್ಯಕರ್ತರು ಸಂಘಟನಕಾರರು ವಿದ್ಯಾರ್ಥಿಗಳು ಎಲ್ಲರೂ ಒಗ್ಗಟ್ಟಾಗಿ ಈ ಒಂದು ಹೋರಾಟದಲ್ಲಿ ಭಾಗವಹಿಸಲಾಗಿತ್ತು ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದ ಶ್ರೀಯುತ ವೆಂಕಟೇಶ್ ರವರು ನಮ್ಮ ಮನವಿ ಪತ್ರ ಸ್ವೀಕರಿಸಿ ನಿಮ್ಮ ಸ್ವೀಕೃತಿಯನ್ನು ಸರ್ಕಾರದ ಮಟ್ಟದಲ್ಲಿ ನಿಮ್ಮ ಶಿಫಾರಸ್ಸು ಮಾಡಿ ಸರ್ಕಾರದ ಆಡಳಿತಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮುಖಂಡರು ನಾಯಕರು ಹಿರಿಯ ಹೋರಾಟಗಾರರು ಮಹಿಳೆಯರು ಹಾಗೆ ಕೆ.ಟಿ ಶಿವಕುಮಾರ್, ಸೂರನ ಹಳ್ಳಿ ಶ್ರೀನಿವಾಸ್, ಚಳ್ಳಕೆರೆಯ ಎಂ. ಶಿವಮೂರ್ತಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಎಂ.ಎಚ್ ತಿಪ್ಪೇಸ್ವಾಮಿ ಲಿಂಗರಾಜು.ಡಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಆದ ಮಲ್ಲೇಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ಶಿವಮೂರ್ತಿ. ಟಿ. ವಿಜಯಕುಮಾರ್ .ಡಿ ತಿಪ್ಪೇಸ್ವಾಮಿ.ಯು. ಎಸ್ಸಿ ಮೋರ್ಚಾ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾದ ಸಿದ್ಧಾರ್ಥ. ವಿ, ಮೋಹನ್ ಕುಮಾರ್, ಲಕ್ಷ್ಮಣ್ ಬಲರಾಮ್, ಪರಶುರಾಮ್ ಶ್ರೀನಿವಾಸ್ ಮಹಾಲಿಂಗಪ್ಪ ಇನ್ನು ಅನೇಕ ಹೋರಾಟಗಾರರು ಭಾಗವಹಿಸಿದ್ದರು. ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ: ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ