“ಆರೋಗ್ಯವೇ ಭಾಗ್ಯ” ಶಾಲಾ ಮಾಹಿತಿ ಕಾರ್ಯಕ್ರಮ ಹಾಗೂ ಜಾಥಾ ಕಾರ್ಯಕ್ರಮ ಜರಗಿತು.
ಬೋಧನ ಜ.10

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಬೋಧನ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶುದ್ಧ ಜಲ ಅಭಿಯಾನದ ಅಂಗವಾಗಿ ಶಾಲಾ ಮಾಹಿತಿ ಕಾರ್ಯಕ್ರಮ ಹಾಗೂ ಜಾಥಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಾನಂದ ಮಗಿ ಮಾತನಾಡಿ ಮನುಷ್ಯ ಆರೋಗ್ಯ ವಂತನಾಗಿರಲು ಶುಧ್ಧ ನೀರಿನ ಬಳಕೆ ತುಂಬಾ ಅವಶ್ಯಕತೆ ಎಂದು ತಿಳಿಸಿದರು ಹಾಗೂ ಶುದ್ದ ಗಂಗಾ ಯೋಜನಾಧಿಕಾರಿಗಳಾದ ಶ್ರೀ ಪಕ್ಕಿರಪ್ಪ ಬೆಲಮುದ್ಧಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತುಕಾರಾಮ ಮೇಳಕೆರೆ ಸದಸ್ಯರಾದ ಪ್ರಕಾಶ್ ನರೋಣ ಶಾಲೆಯ ಸಹ ಶಿಕ್ಷಕರು. ಶುದ್ಧ ಗಂಗಾ ಮೇಲ್ವಿಚಾರಕರಾದ ಸಂಭಾಜಿ ಘಟಕ ಪ್ರೇರಕಾರದ ಜಗನ್ನಾಥ ಶಾಲೆಯ ಎಲ್ಲ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ