ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೈವೆ ರಸ್ತೆ ಡಾಂಬರೀಕರಣ ಕಳಪೆ – ಸರಿ ಪಡಿಸದಿದ್ದರೆ ಆರ್.ಪಿ.ಆಯ್ ಜಿಲ್ಲಾ ಸಂಘಟನೆ ಯಿಂದ ಹೋರಾಟ ಎಚ್ಚರಿಕೆ.

ಇಂಡಿ ಜ.28

ವಿಜಯಪುರ-ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆಲವು ಡಾಂಬರೀಕರಣ ರಸ್ತೆಯು ಗುತ್ತಿಗೆದಾರರು ಹಾಗೂ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳ ನಿರ್ಮಾಣದ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ತಾಲೂಕಿನ ನಾದದಿಂದ ತೆಗ್ಗಿಹಳ್ಳಿ ಕ್ರಾಸ್ ವರೆಗಿನ ರಸ್ತೆಯು ತುಂಬಾ ಕಳಪೆಯದಾಗುತ್ತಿದೆ. ರಸ್ತೆಯು ಎಸ್ಟೀಮೆಂಟ್ ಪ್ರಕಾರ ಅಗೆಯದೆ ಮೇಲ್ಭಾಗದಲ್ಲೆ ಕೆಂಪು ಮಣ್ಣು ಸುರಿದು ರೋಲರ್ ಹಾಯಿಸಿ ರಸ್ತೆ ಹದಗೆಡುಸುತ್ತಿದ್ದಾರೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಮೇಲ್ಭಾಗದಲ್ಲಿ ಹಾಕುತ್ತಿರುವ ಕೆಂಪು ಮಣ್ಣು ತೆಗೆಸಿ ಎಸ್ಟೀಮೆಂಟ್ ಪ್ರಕಾರ ರಸ್ತೆ ಸುಧಾರಣೆ ಮಾಡಬೇಕು ಇಲ್ಲವಾದರೆ ತಾಲೂಕಾ ಆಡಳಿತ ಕಛೇರಿ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆರ್.ಪಿ.ಆಯ್ (ಅಂಬೇಡ್ಕರ್) ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಹರಿಜನ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಬಿ.ಹರಿಜನ.ಇಂಡಿ.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button