ತಪ್ಪುಗಳು ಸಾವಿರ ಆಗುತ್ತಲೇ ಇರುತ್ತವೆ. ಈ ಹೋರಾಟದಲ್ಲಿ ಯಾವುದೇ – ಕೊಂಕುಗಳನ್ನು ಹುಡುಕಲು ಹೋಗಬೇಡಿ.

ಸಾಧ್ಯವಾದರೆ ಜೊತೆಯಾಗಿ. ದಯಮಾಡಿ ಯಾವುದೇ ನೆಗೆಟಿವ್ ಮಾತುಗಳನ್ನು ಆಡಬೇಡಿ. ಇದು ನಮ್ಮ ಜೀವನ್ಮರಣದ ಪ್ರಶ್ನೆ. ದಯಮಾಡಿ ಸಹಾಯ ಮಾಡಿ ಅಥವಾ ದೂರವಿದ್ದು ಬಿಡಿ. ನಿಮ್ಮ ದೂರವನ್ನು ಗೌರವಿಸುತ್ತೇನೆ. ಸಿದ್ದರಾಮಯ್ಯನವರು ಬದ್ಧತೆ ಇಟ್ಟು ಕೊಂಡಿದ್ದಿದ್ದರೆ. ಒಳಮೀಸಲಾತಿ ಜಾರಿಯಲ್ಲಿ ಪ್ರಾಮಾಣಿಕ ವಾಗಿದ್ದಿದ್ದರೆ ನಾವು ಗೌರವಿಸಿ ನಡೆಯುತ್ತಿದ್ದೆವು. ಆದರೆ ಅವರು ತಮ್ಮ ಅಸಹಾಯಕತೆ ಮತ್ತು ಬಂಧನವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಈ ಕ್ರಾಂತಿಕಾರಕ ಹೋರಾಟ. ಅರ್ಥ ಮಾಡಿಕೊಳ್ಳಿ. ಅಡ್ಡ ಬಂದು ಬೂದಿಯಾಗ ಬೇಡಿ. ಚೆಲನ ಶೀಲತೆಯ ವೇಗ ಪಡೆದಾಗ ಅದರ ಸ್ಪಷ್ಟವಾದ ಸ್ವರೂಪ ಕಣ್ಣಾರೆ ಕಾಣಲಿಕ್ಕೆ ದಿನಗಳ ಎಣಿಸಿರಿ.
ಬಿ.ಆರ್. ಭಾಸ್ಕರ್ ಪ್ರಸಾದ್
ಕ್ರಾಂತಿಕಾರಿ ಒಳ ಮೀಸಲಾತಿ
ಪಾದ ಯಾತ್ರೆಯ ರೂವಾರಿಗಳು