ಶ್ರೀ ದಿಗಂಬರವಧೂತ ಶ್ರೀ ಅನ್ನಮಯ ತಾತಾ ಹಠಯೋಗಿ ವೈಭವದ – ಉಚ್ಚಾಯ ಮಹೋತ್ಸವ.
ಮಾನ್ವಿ ನ.04

ಪಟ್ಟಣದಲ್ಲಿನ ಬೆಟ್ಟದಗವಿಯ ಶ್ರೀ ದಿಗಂಬರವಧೂತ ಶ್ರೀಅನ್ನಮಯ ತಾತಾ ಮಹಾ ಹಠ ಯೋಗಿಯವರ ದೇವಸ್ಥಾನದ ಆವರಣದಲ್ಲಿ ಸೋಮವಾರ 40 ನೇ. ವಾರ್ಷಿಕ ಆರಾಧನಾ ಮಹೋತ್ಸವ ಹಾಗೂ ಉಚ್ಚಾಯ ಮಹೋತ್ಸವ ಅಂಗವಾಗಿ ಶ್ರೀಅನ್ನಮಯ ತಾತಾ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಜೆ ಮಾಜಿ ಶಾಸಕ ರಾಜಾ..ವೆಂಕಟಪ್ಪನಾಯಕ ರವರ ನಿವಾಸದಲ್ಲಿ ಸಾರ್ವಜನಿಕರಿಗೆ ಅನ್ನದಾಸೋಹ ನಡೆಯಿತು ಪಲ್ಲಕ್ಕಿಯಲ್ಲಿ ಶ್ರೀಅನ್ನಮಯ ತಾತಾನವರ ಉತ್ಸವ ಮೂರ್ತಿಯನ್ನು ಇಟ್ಟು ಶ್ರೀ ದಿಗಂಬರವಧೂತ ಶ್ರೀ ಅನ್ನಮಯ ತಾತಾನವರ ಭಾವ ಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಲಾಯಿತು. ಉಚ್ಚಾಯ ಮಹೋತ್ಸವಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಚಾಲನೆ ನೀಡಿದರು.

ಸಾವಿರಾರು ಭಕ್ತರ ಜಘೋಷದೊಂದಿಗೆ ವೈಭವದಿಂದ ಶ್ರೀ ದಿಗಂಬರವಧೂತ ಶ್ರೀಅನ್ನಮಯ ತಾತಾ ಮಹಾ ಹಠ ಯೋಗಿಯವರ ಉಚ್ಚಾಯ ಮಹೋತ್ಸವ ನಡೆಯಿತು.
ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ ಹಾಗೂ ಜೆ.ಡಿ.ಎಸ್.ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ಮಹೇಂದ್ರನಾಯಕ, ಮುಖಂಡರಾದ ಡಾ.ಈರಣ್ಣ ಮರ್ಲಟ್ಟಿ, :ಬೆಟ್ಟದಗವಿಯ ಶ್ರೀ ದಿಗಂಬರವಧೂತ ಶ್ರೀಅನ್ನಮಯ ತಾತಾ ಮಹಾ ಹಠ ಯೋಗಿಯವರ ದೇವಸ್ಥಾನ ಸೇವಾ ಸಮಿತಿಯ ಸದಸ್ಯರು ಸೇರಿದಂತೆ ಗಣ್ಯರು,ಜನ ಪ್ರತಿನಿಧಿಗಳು, ಭಕ್ತರು ಭಾಗವಹಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

