14 ವರ್ಷ ಪೂರ್ಣ ಗೊಂಡ ವಿದ್ಯಾರ್ಥಿನಿಯರಿಗೆ – ಎಚ್.ಪಿ.ವಿ ಲಸಿಕೆ ಜಾಗೃತಿ ಶಿಕ್ಷಣ ಅಭಿಯಾನ ಜರುಗಿತು.
ಅಮೀನಗಡ ಜು.15

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ, ಶ್ರೀಸಂಗಮೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯ ಅಮೀನಗಡ ಸಹಯೋಗದಲ್ಲಿ HPV ಲಸಿಕಾ ಅಭಿಯಾನ ಜಾಗೃತಿ ಶಿಕ್ಷಣ ಆಯೋಜಿಸಲಾಗಿತ್ತು.
ಉಪ ಪ್ರಾಚಾರ್ಯರಾದ ಸಿ.ಎಮ್ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ, ಫ್ರೌಡ ಶಾಲಾ ಸಹ ಶಿಕ್ಷಕರಾದ ಎಸ್.ಪಿ ಆಲಮೇಲ್, ಸಸಿಗೆ ನೀರು ಉಣಿಸುವ ಮುಖಾಂತರ ಆರೋಗ್ಯ ಜಾಗೃತಿ ಶಿಕ್ಷಣ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಆಧುನಿಕ ಜೀವನ ಶೈಲಿಯಿಂದ ಅನೇಕ ಮಾರಕ ರೋಗಗಳು ಬರುತ್ತವೆ. ಸ್ತ್ರೀಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗೆ ಆರೋಗ್ಯ ಇಲಾಖೆವತಿಯಿಂದ 14 ವರ್ಷ ಪೂರ್ಣ ಗೊಂಡ ವಿದ್ಯಾರ್ಥಿನಿಯರಿಗೆ ಹ್ಯೂಮನ್ ಪ್ಯಾಪಿಲೋಮ ವೈರಸ್ ನಿಂದ ಗರ್ಭಕಂಠ ಕ್ಯಾನ್ಸರ್ ತಡೆಗೆ HPV ಲಸಿಕೆ ಉಚಿತವಾಗಿ ಹಾಕಲಾಗುವುದು.

ಲಸಿಕೆ ಪಡೆಯುವದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಗರ್ಭಕಂಠ ಕ್ಯಾನ್ಸರ್ ತಡೆಯಬಹುದು ಲಸಿಕೆ ಸುರಕ್ಷಿತವಾಗಿದೆ ಭಯಬೇಡ ಸಣ್ಣಪುಟ್ಟ ತೊಂದರೆ ಕಾಣಿಸಿದರೆ ವೈದ್ಯರ ಸಲಹೆ ಮೆರೆಗೆ ಚಿಕಿತ್ಸೆ ಪಡೆಯಬೇಕು 14 ವರ್ಷ ಪೂರ್ಣಗೊಂಡ 15 ವರ್ಷದೊಳಗಿನ ವಿದ್ಯಾರ್ಥಿಗಳು ಲಸಿಕೆ ಪಡೆಯುವಂತೆ ತಿಳಿಸಿದರು.
ಸಿ.ಎಸ್ ಕೊಲ್ಕಾರ ವಿವಿಧ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಉಪ ಪ್ರಾಚಾರ್ಯರಾದ ಸಿ.ಎಮ್ ಸಜ್ಜನ ವಿದ್ಯಾರ್ಥಿಗಳು ಎಚ್.ಪಿ.ವಿ ಲಸಿಕೆ ಸದುಪಯೋಗ ಪಡಿಸಿ ಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
HPV ಲಸಿಕಾ ಅಭಿಯಾನ ಜಾಗೃತಿ ಶಿಕ್ಷಣ ಕಾರ್ಯಕ್ರಮದಲ್ಲಿ, ಆರೋಗ್ಯ ಸಿಬ್ಬಂದಿಗಳು, ಪ್ರೌಢ ಶಾಲಾ ಸಹ ಶಿಕ್ಷಕರಾದ ಎಚ್.ಎಲ್ ಹೆಬ್ಬಾಳ, ಗುರು ಮಾತೆಯರಾದ ಶ್ರೀಮತಿ ಎ.ಎಸ್ ಸಿಂದಗಿ, ಶ್ರೀಮತಿ ಎಸ್.ಎಸ್ ಬಾದರಡ್ಡಿ, ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
