ಶಾಸಕ ಬಸನಗೌಡ ದದ್ದಲ್ ರಿಂದ – ಪ್ರಗತಿ ಪರಿಶೀಲನಾ ಸಭೆ.
ರಾಜಲಬಂಡಾ ಡಿ.09

ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದ ಪ್ರವಾಸಿ ಮಂದಿರದಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಾಜಲಬಂಡಾ ಗ್ರಾಮಕ್ಕೆ ನೂತನ ಆಸ್ಪತ್ರೆ ಮಂಜೂರಾಗಿದ್ದು, ಸಾದಪೂರ್ ಗ್ರಾಮದ ಆರೋಗ್ಯ ಕೇಂದ್ರವನ್ನು ರಾಜಲಬಂಡಾ ವ್ಯಾಪ್ತಿಗೆ ಸೇರಿಸಿ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು 20 ಕ್ಕೂ ಹೆಚ್ಚು ಹೇರಿಗೆಗಳಾಗುತ್ತಿವೆ ಎಂದಾಗ, ಬಾಣಂತಿಯರ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕ ಆರೋಗ್ಯಧಿಕಾರಿ ಶರಣಬಸವಗೆ ಶಾಸಕರು ಸೂಚಿಸಿದರು.
ಜಲಧಾರೆ ಯೋಜನೆಯ ಅವಧಿ ಡಿಸೆಂಬರ್ ವರೆಗೂ ಮುಗಿಯುತ್ತಿದೆ. ಶೇ. 20 ರಷ್ಟು ಕಾಮಗಾರಿ ನಡೆದಿಲ್ಲ, ಜೆ.ಜೆ.ಎಂ 4 ಹಂತದ ಯೋಜನೆಗಳಲ್ಲಿ ಎರಡು ಹಂತದಲ್ಲಿ ಸರಿಯಾಗಿ ಕಾಮಗಾರಿ ನಿರ್ವಹಿಸದೆ ಇರುವುದರಿಂದ 26 ಕಾಮಗಾರಿಗಳಲ್ಲಿ 19 ಮಾತ್ರ ಪೂರ್ಣವಾಗಿವೆ ಎಂದರು. ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳು ತಮ್ಮ ಆಧೀನಕ್ಕೆ ಪಡೆಯಬೇಡಿ ಗ್ರಾಮೀಣ ಜನರ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕಾಮಗಾರಿ ಪೂರ್ಣವಾಗುವರೆಗೂ ಬಿಲ್ ಪಾವತಿಸದಂತೆ ಹಾಗೂ ನದಿಯಲ್ಲಿ ನೀರು ಇರುವಾಗಲೇ ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಭಿಯಂತರರಾದ ಸತೀಶಗೆ ಸೂಚಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ