ಮಳೆಗೆ ರೋಡ್ ಗಬ್ಬೆದ್ದು ಹೋಗಿ ಇನ್ನೇನು ರಸ್ತೆಯಿಂದ ಜಾರಿ ಹೋಲದಲ್ಲಿ ವಾಲಿದ ಬಸ್ – ಪ್ರಾಣಾಪಾಯ ದಿಂದ ಪಾರಾದ ಪ್ರಯಾಣಿಕರು.
ಕಲಕೇರಿ ಸ.14

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಯಿಂದ ಬೆಕಿನಾಳಗೆ ಹೋಗುವ ರಸ್ತೆ ಈಗಾಗಲೇ ಒಂದು ಬಾರಿ ರಸ್ತೆ ದುರಸ್ತಿ ಇಲ್ಲದ ಕಾರಣಕ್ಕೆ 15 ದಿವಸಗಳ ಕಾಲ ಈ ಹಿಂದೆ ಸುದ್ದಿಯನ್ನು ಪೇಪರ್ ನಲ್ಲಿ ನ್ಯೂಸ್ ನಲ್ಲಿ ಈ ರೋಡಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಭಾಗದ ಶಾಸಕರಿಗೆ ವಿಷಯಗಳನ್ನು ಸಾಕಷ್ಟು ತಿಳಿಸಿದ್ದೇವೆ. ರವಿವಾರ ಇವತ್ತು ಬೆಳಿಗ್ಗೆ ಮತ್ತೆ ಬಸ್ಸ್ ರೋಡಿನಿಂದ ಕೆಳಗೆ ಇಳಿದ ಘಟನೆ ಜರುಗಿತ್ತು.
ಬೆಕಿನಾಳ ಗ್ರಾಮಸ್ಥರು ಎಲ್ಲಾರೂ ಸೇರಿ ಜೆ.ಸಿ.ಪಿ ಮುಖಾಂತರ ಬಸ್ಸ್ ರೋಡಿಗೆ ಮೇಲಕ್ಕೆ ಎಳೆದು ತಂದರು. ಜೀವ ಹಾನಿ ಆಗಿಲ್ಲಾ ಈಗಲಾದರೂ ಈ ರೋಡಿಗೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಭಾಗದ ಶಾಸಕರು ಈಗಲಾದರೂ ಎಚ್ಚೆತ್ತು ಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕರು ಕಣ್ಣು ಮುಚ್ಚಿದಾರೆ ಈ ರಸ್ತೆ (ಗಬ್ಬೆದ್ದು) ಹದಗೆಟ್ಟು ಜನರಿಗೆ ತಿರುಗಾಡಕ ಪರದಾಡುವಂತೆ ಆಗಿದೆ.

ಎಂದು ಇನ್ನೂ ಎರಡು ದಿನದಲ್ಲಿ ಈ ರಸ್ತೆ ದುರಸ್ತಿ ಮಾಡದಿದ್ದರೆ ಗ್ರಾಮಸ್ಥರಿಂದ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು. ಕರ್ನಾಟಕ ರೈತ ಸಂಘದ ಅಧ್ಯಕ್ಷರು ಶ್ರೀಶೈಲ್ ವಾಲಿಕಾರ್ ಲಕ್ಕಪ್ಪ ಬಡಿಗೇರ್ ಮಾಜಿ ತಾಲೂಕ ಪಂಚಾಯತ ಸದಸ್ಯರು, ರಮೇಶ್ ಗೌಡ ವಡ್ಡಡಗಿ, ನಿಂಗಣ್ಣ ಚಟ್ಟರಿಕಿ, ದೇವರೆಡ್ಡಿ ಬಿರಾದಾರ್, ದೊಡ್ಡಪ್ಪ ಪೂಜಾರಿ, ಅಲ್ಲಾಭಕ್ಷ್ ಎಳ್ಗಾರ್, ವಿನಯ್ ಕುಮಾರ್ ಚಲವಾದಿ, ಶ್ರೀಶೈಲ ಸಜ್ಜನ್, ಎಲ್ಲಾರೂ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಮ್.ಬಿ.ಮನಗೂಳಿ.ತಾಳಿಕೋಟೆ