🚨ರಾಜ್ಯ ಮಟ್ಟದ ವಿಶೇಷ ವರದಿ, ಉಡುಪಿಯಲ್ಲಿ ಸಿಎಂ ಸಿದ್ದರಾಮಯ್ಯ ‘ಜನನಾಯಕನ’ ಅಬ್ಬರ – ಕೆಲಸ ಮಾಡದ ಅಧಿಕಾರಿಗಳಿಗೆ ಗೇಟ್ ಪಾಸ್..!🚨
ಉಡುಪಿ ಫೆ.26

ಕರಾವಳಿ ನಗರಿ ಉಡುಪಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾ ದರ್ಬಾರ್ ಮತ್ತು ಪ್ರಗತಿ ಪರಿಶೀಲನಾ ಸಭೆಯು ಕಾಂಗ್ರೆಸ್ ಸರ್ಕಾರದ ‘ಜನಪರ’ ಕಾಳಜಿಗೆ ಸಾಕ್ಷಿಯಾಯಿತು. ಬಡವರ ಪರ ನಿಲ್ಲದ, ಅಭಿವೃದ್ಧಿಗೆ ಅಡ್ಡಿ ಯಾಗುವ ಅಧಿಕಾರಿಗಳನ್ನು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡ ಸಿ.ಎಂ, ಜನ ಸಾಮಾನ್ಯರ ಆಶೀರ್ವಾದದೊಂದಿಗೆ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಿದರು. ಮುಂದಿನ ಚುನಾವಣೆಗೆ ಕಾಂಗ್ರೆಸ್ ತನ್ನ ಕಾರ್ಯ ಕ್ಷಮತೆಯ ಮೂಲಕವೇ ಜನಮತ ಗೆಲ್ಲಲು ಸಜ್ಜಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಸಿ.ಎಂ ಈ ಮೂಲಕ ರವಾನಿಸಿದ್ದಾರೆ.
🔥ಅಧಿಕಾರಿಗಳ ಬೆವರಿಳಿಸಿದ ಸಿ.ಎಂ,ಯಾವ ಇಲಾಖೆಗೆ ಬಿತ್ತು ‘ಖಡಕ್’ ವಾರ್ನಿಂಗ್..?🔥
ಸಾರ್ವಜನಿಕರ ಹಿತ ದೃಷ್ಟಿಯಿಂದ ಪ್ರತಿಯೊಂದು ಫೈಲ್ ಅನ್ನೂ ಸ್ವತಃ ಪರಿಶೀಲಿಸಿದ ಸಿಎಂ, ಕೆಲಸದಲ್ಲಿ ವಿಳಂಬ ಧೋರಣೆ ತೋರಿದ ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲವಾದರು. ಇಲಾಖಾವಾರು ತರಾಟೆಗೆ ಒಳಗಾದವರು ಇಲ್ಲಿವೆ.
📍 ಕಂದಾಯ ಇಲಾಖೆ (Revenue Department):-
94ಸಿ ಮತ್ತು 94ಸಿಸಿ ಅಡಿಯಲ್ಲಿ ಸಾವಿರಾರು ಹಕ್ಕುಪತ್ರ ಅರ್ಜಿಗಳು ಬಾಕಿ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, “ಬಡವರು ಹಕ್ಕು ಪತ್ರಕ್ಕಾಗಿ ಕಚೇರಿ ಅಲೆಯ ಬೇಕೆ? ತಹಶೀಲ್ದಾರ್‌ಗಳು ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನಿಸಿದರು.
📍 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI):-
ಹೆದ್ದಾರಿ ಕಾಮಗಾರಿಗಳ ವಿಳಂಬ ಮತ್ತು ರಸ್ತೆ ಅವ್ಯವಸ್ಥೆಯಿಂದ ಜನರಿಗಾಗುತ್ತಿರುವ ತೊಂದರೆಗೆ ಅಧಿಕಾರಿಗಳೇ ಹೊಣೆ ಎಂದು ಚಾಟಿ ಬೀಸಿದರು.
📍 ಮೆಸ್ಕಾಂ ಮತ್ತು ಇಂಧನ ಇಲಾಖೆ (MESCOM):-
ಅನ್ನದಾತ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
📍 ನಗರಸಭೆ ಮತ್ತು ವರಾಹಿ ಯೋಜನೆ:-
ಉಡುಪಿ ಜನರ ಕುಡಿಯುವ ನೀರಿನ ದಾಹ ನೀಗಿಸುವ ‘ವರಾಹಿ ಯೋಜನೆ’ ವಿಳಂಬಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಿ, ಮುಂದಿನ ಬೇಸಿಗೆಯೊಳಗೆ ಪೂರ್ಣ ಗೊಳಿಸಲು ಡೆಡ್ ಲೈನ್ ನೀಡಿದರು.
📢 ಸಿ.ಎಂ ನೀಡಿದ ಕಟ್ಟು ನಿಟ್ಟಿನ ‘ಜನಪರ’ ಸೂಚನೆಗಳು.
ಮಳೆ ಹಾನಿ ಪರಿಹಾರ:-
“ಮಳೆಯಿಂದ ಹಾನಿಗೊಳಗಾದ ಬಡವರಿಗೆ 24 ಗಂಟೆಯೊಳಗೆ ಪರಿಹಾರ ಸಿಗಬೇಕು. ನಿಯಮಗಳ ನೆಪ ಹೇಳಿ ಯಾರನ್ನೂ ಸತಾಯಿಸ ಬೇಡಿ.”
ಖಾಲಿ ಹುದ್ದೆಗಳ ಭರ್ತಿ:-
“ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ರಾಜ್ಯದ ಎಲ್ಲಾ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು.”
ಮೀನುಗಾರರ ಸಂಕಷ್ಟ:-
“ಮೀನುಗಾರರ ಸೀಮೆ ಎಣ್ಣೆ ಸಬ್ಸಿಡಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ. ಕರಾವಳಿ ಜನರ ಹಿತವೇ ನಮಗೆ ಮುಖ್ಯ”.
ಪರಶುರಾಮ ಥೀಮ್ ಪಾರ್ಕ್:-
“ವಿವಾದಗಳನ್ನು ಬದಿಗಿಟ್ಟು, ಕಾರ್ಕಳದ ಥೀಮ್ ಪಾರ್ಕ್ ಅನ್ನು ಶೀಘ್ರವೇ ಪೂರ್ಣ ಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು.
“ಕೋಮು ಸೌಹಾರ್ದತೆ”:-
“ಸಮಾಜದ ಶಾಂತಿ ಕದಡುವ ಯಾವುದೇ ಶಕ್ತಿಗಳಿದ್ದರೂ ನಿರ್ಧಾಕ್ಷಿಣ್ಯವಾಗಿ ಜೈಲಿಗಟ್ಟಿ.”
🎤 ಪತ್ರಿಕಾ ಗೋಷ್ಠಿಯಲ್ಲಿ ಸಿ.ಎಂ ಸಿದ್ದರಾಮಯ್ಯ ಸಾರಿದ ‘ಧರ್ಮದರ್ಶಿ’ ಮಾತುಗಳು:-
“ನಮ್ಮದು ನುಡಿದಂತೆ ನಡೆದ ಸರ್ಕಾರ. ಐದು ಗ್ಯಾರಂಟಿಗಳು ಇಂದು ರಾಜ್ಯದ ಪ್ರತಿ ಮನೆಗೆ ಶಕ್ತಿ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಂದ್ರೆ ಅದು ಜನರ ಸರ್ಕಾರ. ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ಫೈಲ್ ನೋಡಿದರೆ ಸಾಲದು, ಜನರ ಕಷ್ಟ ಕೇಳಲು ಹಳ್ಳಿಗಳಿಗೆ ಹೋಗಬೇಕು. ಕೆಲಸ ಮಾಡದಿದ್ದರೆ ಮನೆಗೆ ಹೋಗಿ. ಭ್ರಷ್ಟಾಚಾರಕ್ಕೆ ಇಲ್ಲಿ ಜಾಗವಿಲ್ಲ.
“🌊 ಕರಾವಳಿಯ ಅಭಿವೃದ್ಧಿಗೆ ಕಾಂಗ್ರೆಸ್‌ನ ‘ಮಹಾ ಬ್ಲೂಪ್ರಿಂಟ್’ :-
ಉಡುಪಿ ಮತ್ತು ಮಲ್ಪೆ ಬೀಚ್‌ಗಳನ್ನು ಗೋವಾ ಮಾದರಿಯಲ್ಲಿ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪಿಸಲಾಗುವುದು.
ಸಿ.ಆರ್.ಝಡ್ ನಿಯಮಗಳನ್ನು ಸಡಿಲ ಗೊಳಿಸಿ ಅಭಿವೃದ್ಧಿಗೆ ವೇಗ ನೀಡಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು.
ಸಂಕ್ಷಿಪ್ತ ವಿಶ್ಲೇಷಣೆ:-
ಸಿ.ಎಂ ಸಿದ್ದರಾಮಯ್ಯ ಅವರ ಇಂದಿನ ಭೇಟಿಯು ಕೇವಲ ಆಡಳಿತಾತ್ಮಕ ಸಭೆಯಲ್ಲ, ಬದಲಾಗಿ ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಮತದಾರನಿಗೆ “ನಾವು ನಿಮ್ಮೊಂದಿಗಿದ್ದೇವೆ” ಎಂಬ ಭರವಸೆ ನೀಡುವ ಪ್ರಕ್ರಿಯೆ. ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಯಶಸ್ಸಿನೊಂದಿಗೆ ಕಾಂಗ್ರೆಸ್ ಮುಂಬರುವ ಚುನಾವಣೆಗೂ ಮುನ್ನವೇ ಗೆಲುವಿನ ಮುನ್ನುಡಿ ಬರೆದಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ
