ಪೋಲಿಸ್ ಇಲಾಖೆಯ ವಿಫಲ ಯತ್ನದ ದಿವ್ಯ ನಿರ್ಲಕ್ಷ್ಯದ ನಡೆ ಖಂಡಿಸಿ – ದಲಿತ ಸಂಘಟನೆ ಹಾಗೂ ಪ್ರಗತಿಪರ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ.

ಸಿಂದಗಿ ಫೆ.26

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬಿ.ಕೃಷ್ಣಪ್ಪ ನವರ ಬಣ ಹಾಗೂ ಪ್ರಗತಿ ಪರ ಸಂಘಟನೆಯ ವತಿಯಿಂದ ಕಕ್ಕಳಮೇಲಿ ಗ್ರಾಮದಿಂದ ಸಿಂದಗಿ ಅಂಬೇಡ್ಕರ ಸರ್ಕಲ್ ವರೆಗೆ ಬೃಹತ್ ಕಾಲ್ನಡಿಗೆಯ ಜಾಥಾ ಹಮ್ಮಿಕೊಂಡಿದ್ದಾರೆ.

ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ದಿನಾಂಕ 15/10/2019 ರಂದು ಗ್ರಾಮದಲ್ಲಿನ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಶಿರಚ್ಛೇದನ ಮಾಡಿ ಅವಮಾನ ಗೊಳಿಸಿದ ಆರೋಪಗಳನ್ನು ಕಂಡು ಹಿಡಿದು ಬಹಿರಂಗ ಪಡಿಸುವಲ್ಲಿ ವಿಫಲವಾದ ಪೋಲಿಸ್ ಇಲಾಖೆಯ ಆಡಳಿತ ಹಾಗೂ ಅಂಬೇಡ್ಕರ ಮೂರ್ತಿಗೆ ಅವಮಾನ ಮಾಡಿ ಏಳು ವರ್ಷ ಗತಿಸಿದರು ಆರೋಪಗಳನ್ನು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ಧೋರಣೆ ತಳೆದ ಪೋಲಿಸ್ ಸಿಬ್ಬಂದಿಗಳಿಗೆ ಅಮಾನತ್ ಮಾಡಬೇಕು ಹಾಗೂ ಏಳು ವರ್ಷಗಳಿಂದ ಸತತವಾಗಿ ತಾಲ್ಲೂಕ ಕಛೇರಿ ಮುಂದೆ ಹಾಗೂ ಜಿಲ್ಲಾ ಕಛೇರಿಗಳು ಮುಂದೆ ಹೋರಾಟ ಹಾಗೂ ಪ್ರತಿಭಟನೆ ಮಾಡಿದರು.

ಈ ಪ್ರಕರಣಕ್ಕೆ ನ್ಯಾಯ ಸಿಕ್ಕಿಲ್ಲಾ ನಮ್ಮ ಜಾತಿಗೆ ಮಹಾ ಕಳಂಕವಾಗಿದೆ ಕೂಡಲೇ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳ ಮಧ್ಯೆ ಪ್ರವೇಶ ಮಾಡಬೇಕು ಹಾಗೂ ಮಹಾ ನಾಯಕನ ಮೂರ್ತಿಗೆ ಅವಮಾನ ಆರೋಪಿಗಳಿಗೆ ಕೂಡಲೇ ಬಂಧಿಸ ಬೇಕು, ಇದನ್ನು ಖಂಡಿಸಿ ದಿನಾಂಕ 25/02/2026 ರಂದು ಕಕ್ಕಳಮೇಲಿ ಗ್ರಾಮದಿಂದ ಸಿಂದಗಿ ಅಂಬೇಡ್ಕರ್ ಸರ್ಕಲ್‌ ವರಿಗೆ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ದಿನಾಂಕ ೨೬/೦೨/೨೦೨೬ ರಂದು ಅನಿರ್ದಿಷ್ಟ ಕಾಲ ಥರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಹಾಗೂ ಕಾಲ್ನಡಿಗೆಯ ಜಾಥಾದಲ್ಲಿ ದಲಿತ ಮುಖಂಡರಾದ ರಮೇಶ ಆಂಸಗಿ, ಪ್ರಕಾಶ ಗುಡಿಮನಿ, ಶರಣು ಸಿಂಧೆ, ಹಾಗೂ ಇನ್ನೂ ಸಾವಿರಾರು ದಲಿತ ಮುಖಂಡರು ಈ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button