ಜಂಟಿ ಸರ್ವೇ ಬಳಿಕ ಭೂ ಹಂಚಿಕೆ – ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಭರವಸೆ.
ನರಸಿಂಹರಾಜಪುರ ಫೆ.28

ಭೂ ರಹಿತ ದಲಿತರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ತಾಲೂಕ ಕಚೇರಿ ಎದುರು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಶುಕ್ರವಾರಕ್ಕೆ 12 ನೇ. ದಿನವಾಗಿರುತ್ತದೆ. ಈ ದಿನ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ರವರ ನೇತೃತ್ವದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ರವರು ಭೇಟಿ ನೀಡಿದರು.
ರಾಜ್ಯ ಸಂಚಾಲಕ ತರೀಕೆರೆ.ಎನ್ ವೆಂಕಟೇಶ್ ಮನವಿ ಸಲ್ಲಿಸಿ ಮಾತನಾಡಿ ನರಸಿಂಹರಾಜಪುರ ತಾಲೂಕಿನ ರಾವೂರು ಗ್ರಾಮದ ಸರ್ವೆ ನಂಬರ್ 157, 159 ಹಾಗೂ ಶಿರಗಳಲೆ ಗ್ರಾಮದ ಸರ್ವೆ ನಂಬರ್ 126, 127 ನಾಗಲಾಪುರ ಸರ್ವೆ ನಂಬರ್ 28, 177 ರಲ್ಲಿ ನಕಾಶ ತಯಾರಿಸಿ ದಲಿತರಿಗೆ ತಲಾ 5 ಎಕರೆ ಜಮೀನು ಮೀಸಲಿಡಲಾಗಿತ್ತು. ಅದನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಹಂದೂರು ಗ್ರಾಮದ ಸರ್ವೆ ನಂಬರ್ 126 ಬೀಳಲುಕೊಪ್ಪ ಸರ್ವೆ ನಂಬರ್ 45 ರಲ್ಲಿ ದಲಿತರಿಗೆ ಜಮೀನು ಮಂಜೂರಾತಿ ಮಾಡಿ ಕೊಡಬೇಕು ತಾಲೂಕಿನ ಮೀನು ಕ್ಯಾಂಪಿನಲ್ಲಿ ದಲಿತರ ವಾಸವಾಗಿರುವ ಮನೆಗಳಿಗೆ ಕಂದಾಯ ಗ್ರಾಮ ಉಪ ಕಂದಾಯ ಗ್ರಾಮ ಯೋಜನೆ ಅಡಿ ಹಕ್ಕುಪತ್ರ ಕೊಡಬೇಕು, ಸೂಸಲವಾನಿ ಗ್ರಾಮದ ಸರ್ವೆ ನಂಬರ್ 39 ರಲ್ಲಿ ಹಾಗೂ ಕಡು ಹೀನಬೈಲು ಗ್ರಾಮದ ಸರ್ವೇ ನಂಬರ್ 40 ರಲ್ಲಿ ಕಾಫಿ ತೋಟದ ಮಾಲೀಕರು ಅಕ್ರಮ ಒತ್ತುವರಿ ಮಾಡಿರುವ ಜಮೀನು ತೆರುವು ಗೊಳಿಸಿದ್ದು ಅರಣ್ಯ ಭೂಮಿ ಹೊರತು ಪಡಿಸಿ ಸರ್ಕಾರಿ ಭೂಮಿಯನ್ನು ಭೂ ರಹಿತ ದಲಿತರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಮಾತನಾಡಿ ಅಕ್ರಮ ಭೂ ಒತ್ತವರಿಗೆ ಸಂಬಂಧಿಸಿದಂತೆ ಎಸ್.ಐ.ಟಿ ರಚನೆ ಯಾಗಿದೆ ಕೊಪ್ಪ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಗೆ ಸಂಬಂಧಿಸಿದ ಜಂಟಿ ಸಮೀಕ್ಷೆ ನಡೆಯುತ್ತಿದೆ ಜಂಟಿ ಸರ್ವೇ ಪೂರ್ಣ ಗೊಳ್ಳಲು ಮೇ ತಿಂಗಳ ವರೆಗೂ ಕಾಲಾವಕಾಶವಿದೆ ಎಂದರು.
ಜಂಟಿ ಸರ್ವೇ ಪೂರ್ಣಗೊಂಡ ನಂತರ ಕಂದಾಯ ಭೂಮಿ ಎಷ್ಟಿದೆ, ಅರಣ್ಯ ಭೂಮಿ ಎಷ್ಟಿದೆ..? ಎಷ್ಟು ಭೂಮಿ ಲಭ್ಯವಾಗಲಿದೆ ಎಂಬ ಸಂಪೂರ್ಣ ಚಿತ್ರಣ ಸಿಗಲಿದೆ ಆನಂತರ ಜಮೀನು ಶೇಕಡ 50 ರಷ್ಟು ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತರೀಕೆರೆ ಉಪ ವಿಭಾಗಾಧಿಕಾರಿ ಎನ್.ವಿ ನಟೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಲತಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ ಭವಾನಿ ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ತಾಲೂಕು ಸಂಚಾಲಕ ಸಿಜು ತಾಲೂಕು ಸಂಘಟನಾ ಸಂಚಾಲಕ ಮೃತ್ಯುಂಜಯ ಎಸ್ ರಾಜು ರವಿ ಕಧೀರ್ ಕುಮಾರ್ ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ರಹಮಾನ್, ವಾಸಂತಿ, ರೇಣುಕಾ, ವೆನಿಲ ಇದ್ದರು. ಜಿಲ್ಲಾಧಿಕಾರಿಗಳು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಸ್ಥಗಿತ ಗೊಳಿಸಲಾಯಿತು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು
