ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ – ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ.

ಗುಬ್ಬೆವಾಡ ಮೆ.01

ಸಿಂದಗಿ ತಾಲ್ಲೂಕಿನ ಗುಬ್ಬೆವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರು ಶ್ರೀ ರವೀಂದ್ರ ಬಂತನಾಳ ವಹಿಸಿ ಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟಕರಾಗಿ ಶಿಕ್ಷಕರಾದ ಶ್ರೀ ಅಶೋಕ ಹಂಚಲಿ ಆಗಮಿಸಿ ತಮ್ಮ ಮಾತಿನ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವಿಷಯಗಳನ್ನು ತಿಳಿಸಿ ವಿಜ್ಞಾನ ಮೇಳದ ಮಹತ್ವವನ್ನು ತಿಳಿಸಿ ಕೊಟ್ಟರು.

ಅತಿಥಿಗಳಾಗಿ ಆಗಮಿಸಿದ ಬಿ.ಬಿ ಪಾಟೀಲ ಇ.ಸಿ.ಓ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯ ಸಿಂದಗಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ರಾಸಾಯನಿಕ ಬಳಸಿ ಮತ್ತು ದ್ವಿಲೋಹ ಪಟ್ಟಿ ಬಳಸಿ ವೈಜ್ಞಾನಿಕವಾಗಿ ಮಾಡಲಾಯಿತು.

ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಹಲವಾರು ಮಾದರಿಗಳನ್ನು ಗಣಿತ ಶಿಕ್ಷಕರಾದ ಸುನಿಲ್ ಬಿರಾದಾರ ಮತ್ತು ವಿಜ್ಞಾನ ಶಿಕ್ಷಕರಾದ ಸಂತೋಷಕುಮಾರ ಬಿರಾದಾರ ಇವರ ಮಾರ್ಗದರ್ಶನದಲ್ಲಿ ತಯಾರಿಸಿ ವಿವರಣೆಗಳನ್ನು ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮತಿ ಎ.ಎಸ್ ಡೋಮನಾಳ ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಸಂಗೀತ ಶಿಕ್ಷಕರಾದ ರಮೇಶ ಗುಬ್ಬೆವಾಡ ಮತ್ತು ದೈಹಿಕ ಶಿಕ್ಷಕರಾದ ಬಸವರಾಜ ಬಿರಾದಾರ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ನಿಲಯ ಪಾಲಕರದ ಪ್ರಭಾಕರ್ ಪಾಟೀಲ್, ಶ್ರೀಶೈಲ್ ಮಳ್ಳಿ, ಬಿ.ಸಿ ಮಲಗೇಡ್ ನಿಂಗನಗೌಡ ಚಂಗಳಿ ಅಲ್ಲಭಕ್ಷ ಕೇರುಟಗಿ ಸಂಗಮೇಶ ಕಡ್ಲೆವಾಡ, ಎ.ಎಲ್ ನೈಕೊಡಿ, ರಾಧಾ ಕೂಡಗಿ ಇತರೆ ಎಲ್ಲಾ ಸಿಬ್ಬಂಧಿಗಳು ಉಪಸ್ಥಿತರಿದ್ದು ಎಲ್ಲಾರೂ ಸಹಕಾರ ದೊಂದಿಗೆ ವಿಜ್ಞಾನ ಮೇಳ ಯಶಶ್ವಿಯಾಗಿ ಜರುಗಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button