ವಿಶ್ವ ಕಲಾ ಸಮ್ಮೇಳನದಲ್ಲಿ ಶ್ರೀ ಮುದ್ದುರಾಜ್.ಕೆ ಹುಲಿತೊಟ್ಲು ರವರ ಚೊಚ್ಚಲ ಭವ್ಯಾಂತರಂಗ – ಕೃತಿ ಲೋಕಾರ್ಪಣೆ.
ದಾವಣಗೆರೆ ಮಾ.02

ದಾವಣಗೆರೆಯಲ್ಲಿ ನಡೆದ ವಿಶ್ವ ಕಲಾ ಸಮ್ಮೇಳನದಲ್ಲಿ, ಶ್ರೀಮುದ್ದುರಾಜ್ ಕೆ ಹುಲಿತೊಟ್ಲು ರವರ ಚೊಚ್ಚಲ ಕೃತಿ ಭವ್ಯಾಂತರಂಗವನ್ನು ಸಮ್ಮೇಳನದ ಅಧ್ಯಕ್ಷರಾದ ಡಾ,. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ್, ಸ್ವಾಮಿ ಚಾರಿಟಬಲ್ ಟ್ರಸ್ಟ್. ಲೋಕಾರ್ಪಣೆ ಗೊಳಿಸಿದರು.
ತನು ಶ್ರೀ ಸಾಹಿತ್ಯ ವೇದಿಕೆಯ ಸಂಸ್ಥಾಪಕಾಧ್ಯಕ್ಷರಾದ ರಾಜು ಸೂಲೇನಹಳ್ಳಿ, ಬೆಳಕು ಸಂಸ್ಥೆ ಸಂಸ್ಥಾಪಕಾಧ್ಯಕ್ಷರಾದ ಅಣ್ಣಪ್ಪ ಮೇಟಿ ಗೌಡ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಡಾ, ಎಸ್.ಹೆಚ್ ಶಫಿಉಲ್ಲ. ಎಸ್.ಎಸ್ ಪಾಟೀಲ್, ವಿಶ್ವದರ್ಶನ ದಿನಪತ್ರಿಕೆ. ಸಮೀಉಲ್ಲ, ಸಮಾಜ ಸೇವಕರು ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ,ಅಂತರಾಜ್ಯದಿಂದ ಆಗಮಿಸಿದ ಈ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಕೃತಿ ಲೋಕಾರ್ಪಣೆ,ಹಾಗೂ ಕೃತಿಯ ವಿಮರ್ಶೆಯಲ್ಲಿ ಭಾಗವು ಅತ್ಯಮೂಲ್ಯವಾಗಿದ್ದು, ಒಂದು ಉತ್ತಮ ಕೃತಿಯಾಗಿದೆ ಎಂದು ಕೃತಿ ವಿಮರ್ಶಕರಾದ ಸಾಹಿತಿ ಶಫಿಉಲ್ಲಾರವರು ಸಮ್ಮೇಳನದಲ್ಲಿ ಉಚ್ಛರಿಸಿದರು.
ಲೋಕಾರ್ಪಣೆಗೆ ಕುಟುಂಬಸ್ಥರಾದ ಭವ್ಯ, ಸಮಥ್೯ ರಾಜ್, ಕರೀಶಪ್ಪ, ಮುದ್ದಮ್ಮ, ಕೃಷ್ಣಾರೆಡ್ಡಿ, ಹನುಮಕ್ಕನವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
