ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ – ಸುಮಾರು 20 ಬಣವಿಗಳು ಅಗ್ನಿಗೆ ಆಹುತಿ.

ಹ್ಯಾಳ್ಯ ಮಾ.06

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಸುಮಾರು 8-10 ಕಣಗಳಿಗೆ ಬೆಂಕಿ ಹತ್ತಿ ಸುಮಾರು 20 ಬಣವಿಗಳು ಉರಿಯುತ್ತಿತ್ತು ಇದಕ್ಕೆ ಮುಖ್ಯ ಕಾರಣ ಸ್ಥಳೀಯರು ಹೇಳುವಂತೆ ಜಾಲಿ ಮರದಲ್ಲಿ ಹೋಗಿರುವ ವಿದ್ಯುತ್ ತಂತಿಗಳಿಂದ ಶಾರ್ಟ್ ಸರ್ಕ್ಯೂಟ್ ಬೆಂಕಿ ತಗುಲಿ 10 ನಿಮಿಷದಲ್ಲಿ ಹತ್ತಿ ಉರಿದಿದೆ.

ಕಣದಲ್ಲಿರುವ ಟ್ರ್ಯಾಕ್ಟರ್, ದನಗಳನ್ನು, ಕುರಿಗಳನ್ನು ಹಾಗೂ ಮೆಕ್ಕೆ ಜೋಳದ ರಾಶಿ ಬೆಂಕಿಯಿಂದ ತಡೆ ಗಟ್ಟುವಲ್ಲಿ ಯುವಕರು ಮತ್ತು ಇಲ್ಲಿನ ಊರಿನ ಸಾರ್ವಜನಿಕರು ಮುಂದಾಗಿ ನಂತರ ಅಗ್ನಿಶಾಮಕ ದಳ ವಾಹನ ಕರೆಸಿ ನಂದಿಸಲು ಪ್ರಯತ್ನಿಸಿದ್ದಾರೆ ಸ್ಥಳಕ್ಕೆ ಧಾವಿಸಿದ ತಶೀಲ್ದಾರ್ರಾದ ಜಿ.ಕೆ ಅಮರೇಶ್ ಮತ್ತು ಪೊಲೀಸ್ ಸಿಬ್ಬಂದಿ ವರ್ಗವು ಸೇರಿದಂತೆ ಹಲವು ಅಧಿಕಾರಿಗಳು ಸೇರಿದ್ದರು.

ಕೊಟ್ರೇಶ್, ಶಿವಜ್ಜ, ಬಿ.ಶಿವರಾಜ್ ಡಿ.ಎಸ್.ಎಸ್ ಕೊಟ್ಟೂರು ತಾಲೂಕ ಅಧ್ಯಕ್ಷರು, ಮಂಜುನಾಥ್ ಚಲವಾದಿ ಮಹಾ ಸಭಾ ತಾಲೂಕ ಅಧ್ಯಕ್ಷರು, ಶ್ರೀಧರ ಒಡೆಯರ್ ರೈತ ಸಂಘದ ಘಟಕದ ಅಧ್ಯಕ್ಷರು ಇನ್ನೂ ಹಲವರು ಸೇರಿ ಇದಕ್ಕೆ ತಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ರೈತರಿಗೆ ನಷ್ಟವಾಗಿರುವ ದವಾಸು ಧಾನ್ಯ ಮೇವುಗಳನ್ನು ಒದಗಿಸಬೇಕು ಒಟ್ಟಿನಲ್ಲಿ ಇದಕ್ಕೆ ಪರಿಹಾರ ಕೋರಿ ನಮ್ಮ ಸುದ್ದಿ ವಾಣಿಯೊಂದಿಗೆ ಮಾತನಾಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button