ಪವರ್ ಸ್ಟಾರ್ ಪುನೀತ ರಾಜಕುಮಾರ್ ಪ್ರಶಸ್ತಿಗೆ – ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಆಯ್ಕೆ.

ಸುಗೂರ ಮಾ.12

ಮಾರ್ಚ್ 12 ರಂದು “ಕರ್ನಾಟಕ ರತ್ನ” ಪವರ್ ಸ್ಟಾರ್ ಪುನೀತ ರಾಜಕುಮಾರ್ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವರು ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ ನಿಸ್ವಾರ್ಥ ಸಮಾಜದ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಆಯ್ಕೆಯಾಗಿದ್ದಾರೆ.

ಇದೇ ಮಾರ್ಚ್ – ೧೫ ರಂದು ರವಿವಾರ ದಿನ ದಂದು ಡಾ, ಅಂಬೇಡ್ಕರ್ ಸಭಾ ಭವನ ಯಲಹಂಕ ಬೆಂಗಳೂರಿನಲ್ಲಿ ಟಿವಿ-೪ ಸುದ್ದಿ ವಾಹಿನಿ, ಶ್ರೀ ಶಿರಡಿ ಸಾಯಿದೀಪ ಮೀಡಿಯಾ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಶ್ರೀ ಶಿರಡಿ ಸಾಯಿ ದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ವಿವಿಧ ರೀತಿಯ ಗಣನೀಯ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅನಾಥರಿಗೆ. ವಿಕಲ ಚೇತನರಿಗೆ. ಪೌರ ಕಾರ್ಮಿಕರಿಗೆ. ಅಂಧರಿಗೆ.. ಸಾಧು-ಸಂತರಿಗೆ. ಹಿರಿಯ ವೃದ್ದರಿಗೆ. ಬುದ್ದಿ ಮಾಧ್ಯರಿಗೆ. ಕಟ್ಟಡ ಕಾರ್ಮಿಕರಿಗೆ. ಹಿರಿಯ ನಿರ್ಗತಿಕರಿಗೆ. ಅನಾಥ ಶಾಲಾ ಮಕ್ಕಳಿಗೆ. ಮೂಕರಿಗೆ. ಹೀಗೆ 1850 ಕ್ಕೂ ಹೆಚ್ಚು ಜನತೆಗೆ ಉಚಿತವಾಗಿ (ಕ್ಷೌರ) ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಈ ವರ್ಷ ಕೊಡು ಮಾಡುವ “ಕರ್ನಾಟಕ ರತ್ನ” ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ. TV-4 ಕನ್ನಡ ಸುದ್ದಿವಾಹಿನಿ ಮಾಲೀಕರು ಮತ್ತು ಸಂಸ್ಥಾಪಕ ಅಧ್ಯಕ್ಷರು ಶ್ರೀ ಶಿರಡಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಚಲನ ಚಿತ್ರ ನಿರ್ಮಾಪಕರಾದ ಡಾ, ಸಾಯಿ ಸತೀಶ ತೋಟಯ್ಯ ಸರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button