ಶ್ರೀಮದ್ ಭಗವದ್ಗೀತಾ – ಕಲಿಕಾ ಕಾರ್ಯಕ್ರಮ.
ಚಳ್ಳಕೆರೆ ಮಾ.17

ಶಿವ ನಗರದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ಕಾರ್ಯಕ್ರಮ ನಡೆಯಿತು.

ಈ ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದಸ್ಯರಿಂದ ವಿಶೇಷ ಭಜನೆ ಮತ್ತು ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ನಡೆಯಿತು.

ಕಲಿಕಾ ಕಾರ್ಯಕ್ರಮದಲ್ಲಿ ಶೈಲಜಾ, ನಾಗರತ್ನಮ್ಮ , ಗೀತಾಲಕ್ಷ್ಮೀ, ವಿಜಯಲಕ್ಷ್ಮೀ, ರಶ್ಮಿ ವಸಂತ, ರಶ್ಮಿ ರಮೇಶ್ , ಕವಿತಾ, ಯತೀಶ್ ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಸುಧಾಮಣಿ, ದ್ರಾಕ್ಷಾಯಣಿ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
