ಪವನ್ ವಿದ್ಯುತ್ ಸ್ಥಾವರಕ್ಕೆ ಸಿಡಿಲು ಬಡಿದ ಪರಿಣಾಮವಾಗಿ – ಬೆಂಕಿ ಹೊತ್ತಿ ಉರಿದ ಘಟನೆ ಸಂಭವಿಸಿದೆ.
ಯಂಬಳಿ ಮಾ.17

ಕಾನ್ ಹೊಸಹಳ್ಳಿ ಹೋಬಳಿ ಸಮೀಪದ ಯಂಬಳಿ ಗ್ರಾಮದಲ್ಲಿ ಸೋಮವಾರ ಸಂಜೆ ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.
ಯಂಬಳ್ಳಿ ವಡ್ಡರ ಹಟ್ಟಿಯ ಬಳಿ ನೀಲಪ್ಪ ಶರಣಪ್ಪ ಎನ್ನುವವರ ಜಮೀನಿನಲ್ಲಿ ಅಳವಡಿಸಿದ್ದ ಖಾಸಗಿ ಕಂಪನಿಯ ವಿಂಡ್ ಫ್ಯಾನ್ ಗೆ ಸಿಡಿಲು ಬಡಿದು ಹೊತ್ತಿ ಉರಿಯಿತು.
ಪರಿಣಾಮ ದಟ್ಟ ಹೊಗೆ ಆವರಿಸಿ ಕೊಂಡಿತು. ಸಮೀಪದ ಸ್ಥಳೀಯರನ್ನು ಬಿಡದಂತೆ ಕಂಪನಿಯವರು ತಡೆದಿದ್ದಾರೆ. ಹೋಬಳಿಯಲ್ಲಿ ಸೋಮವಾರ ಸಿಡಿಲು ಗುಡುಗು ಸಹಿತ ಸಾಮಾನ್ಯ ಮಳೆ ಬಂದಿದೆ. ಅಕಾಲಿಕವಾಗಿ ಧಿಡೀರ್ ಮಳೆ ಯಾಗಿದ್ದರಿಂದ ರೈತಾಪಿ ವರ್ಗ ಜಾನುವಾರುಗಳಿಗೆ ಮೇವು ಹಾಗೂ ಕಟಾವು ಮಾಡಿದ ರಾಗಿಯನ್ನು ರಕ್ಷಿಸಿ ಕೊಳ್ಳಲು ಪರದಾಡಿದರು.
ಈಗ ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣ ಪಾಯಗಳು ಸಂಭವಿರುವುದಿಲ್ಲ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
