ಚಿತ್ರ ರಂಗದ ಭರವಸೆಯ – ನಾಯಕ ಮನ್ವಿತ್.
ಬೆಂಗಳೂರು ಮಾ.22

ಚಿತ್ರ ರಂಗವೇ ಹಾಗೆ. ಎಲ್ಲರನ್ನೂ ಸೆಳೆಯಬಲ್ಲ ಸೂಜಿಗಲ್ಲು. ಕಲೆಯನ್ನು ಕೆಲವರು ಉಸಿರಾಗಿಸಿ ಕೊಂಡು ಅದರಲ್ಲೇ ತಮ್ಮ ಪ್ರತಿಭೆಯನ್ನು ತೋರಿ ಹೆಸರು ಗಳಿಸಿದ್ದಾರೆ. ಇನ್ನೂ ಕೆಲವರು ಗುರುತಿಸಿ ಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಅಂಥ ಕಲೆಯ ಬೆನ್ನು ಹತ್ತಿ ಹೊರಟು ಇದೀಗ ಕನ್ನಡ ಚಿತ್ರ ರಂಗದ ನಾಯಕ ನಟರಾಗಿ ಭರವಸೆಯನ್ನು ಹುಟ್ಟು ಹಾಕಿರುವವರಲ್ಲಿ ಸರಗೂರು ತಾಲೂಕಿನ ಕೊತ್ತೆಗಾಲ ಮೂಲದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ‘ಮನ್ವಿತ್’ ಕೂಡ ಒಬ್ಬರು.

ಮೈಸೂರಿನ ರಂಗಾಯಣದ ‘ಸಂಚಲನ’ ಎಂಬ ರಂಗ ತಂಡ ಸೇರಿ ಸುಮಾರು ೧೨ ನಾಟಕದಲ್ಲಿ ಅಭಿನಯಿಸಿ ಪರಿಣಿತಿ ಪಡೆದ ನಂತರ ೨೦೨೧ ರಲ್ಲಿ ‘ಆಂಗರ್’ ಎಂಬ ಚಲನ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣ ಮಾಡಿದರು. ಅಂಗರ್ ಚಿತ್ರದ ಯಶಸ್ಸಿನ ನಂತರ “ಭಾರತದ ಪ್ರಜೆಗಳಾದ ನಾವು” ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದರು.
ಈ ಚಿತ್ರಕ್ಕೆ ಕರ್ನಾಟಕ ಸರ್ಕಾರದಿಂದ ಉತ್ತಮ ಸಾಮಾಜಿಕ ಕಳಕಳಿಯ ಚಿತ್ರ ಎಂದು ಪ್ರಶಂಸೆಗೆ ಒಳಪಟ್ಟು ಇವರಿಗೆ ಕರ್ನಾಟಕ ಸರ್ಕಾರದಿಂದ ಗೌರವಿಸಲಾಯಿತು. ನಂತರ”ಸಂಜು” ಎಂಬ ಕನ್ನಡ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಮಿಂಚಿದರು.

ಈ ಚಿತ್ರವು ತುಂಬ ಯಶಸ್ಸನ್ನು ತಂದು ಕೊಟ್ಟಿತು. ಪ್ರಸ್ತುತ ಇವರ ಕೈಯಲ್ಲಿ “ಹೈವೇ ನಂಬರ್ ೨೭೫” ಎಂಬ ಹಾರರ್ ಚಿತ್ರ , ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಹುನಗುಂದ, ಇಳಕಲ್ಲ ತಾಲೂಕಿನಲ್ಲಿ ಚಿತ್ರೀಕರಣವಾದ ಗುರುದತ್ ಮುಸುರಿ ನಿರ್ದೇಶನದ “ಡೆತ್ ಸರ್ಟಿಫಿಕೇಟ್” ಎಂಬ ಚಲನ ಚಿತ್ರ ಮತ್ತು “ಬೇಬಿ @೨೦೨೫” ಹಾಗೂ “ಧ್ರುವನಕ್ಷತ್ರ” ಎಂಬ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮತ್ತೆ ತಮಿಳು ಚಿತ್ರದ “ಕೊಪ್ಪಂ” ಎಂಬ ಚಲನ ಚಿತ್ರದಲ್ಲಿಯೂ ನಾಯಕ ನಟನಾಗಿ ನಟಿಸಿದ್ದು ಅದು ಕೂಡಾ ಬಿಡುಗಡೆಗೆ ಸಿದ್ಧವಾಗಿದೆ.

ಹಿಂದಿ ಚಿತ್ರ ರಂಗದಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಬಂದಿದ್ದು ಜೊತೆಗೆ ಕನ್ನಡದಲ್ಲಿ ಎರಡು ಪ್ರಮುಖ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿವೆ ಎಂದು ಖುಷಿಯಲ್ಲೇ ಹೇಳುತ್ತಾರೆ. ನಮ್ಮ ಈ ಪ್ರತಿಭಾನ್ವಿತ ನಾಯಕ ನಟನಿಗೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಚಿತ್ರ ರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಮಿಂಚಲಿ ನಾಡಿನ ಸಾಂಸ್ಕೃತಿಕ ಪ್ರತಿಭಾ ಸಂಪನ್ನತೆಯ ವ್ಯಕ್ತಿತ್ವದೊಂದಿಗೆ ಜನಪ್ರಿಯ ನಟನಾಗಿ ಬೆಳೆಯಲಿ ಎಂದು ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಶುಭ ಹಾರೈಸೋಣ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ
