ಶ್ರೀರಾಮನವಮಿ ಪ್ರಯುಕ್ತ ಶ್ರೀಬ್ರಹ್ಮ ಚೈತನ್ಯ ಭಕ್ತ ಮಂಡಳಿಯಿಂದ – ಶ್ರೀರಾಮನ ಭಜನೆ.
ಚಳ್ಳಕೆರೆ ಮಾ.24

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಮಾರ್ಚ್ 27 ರ ಶುಕ್ರವಾರ ಸಂಜೆ 5:30 ರಿಂದ 7 ಗಂಟೆಯ ವರೆಗೆ ಶ್ರೀಬ್ರಹ್ಮಚೈತನ್ಯ ಭಕ್ತ ಮಂಡಳಿಯಿಂದ ವಿಶೇಷ ಶ್ರೀರಾಮನ ಭಜನೆಗಳ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸುವಂತೆ ಎಂದು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
