ಸಾವಿನಲ್ಲೂ ಅಂದರ ಬಾಳಿಗೆ ಬೆಳಕು ಕೊಟ್ಟ – ಢವಳಗಿ ಗ್ರಾಮದ ಆಕಾಶ.
ಢವಳಗಿ ಮಾ.26

ಮಾನವಿತೆಯ ಮೌಲ್ಯವನ್ನು ಸಾರುವ ಮನ ಮುಟ್ಟುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದ ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ 10 ವರ್ಷದ ಬಾಲಕ ಆಕಾಶ್ ಹರಿಜನ್ ಮೃತಪಟ್ಟಿದ್ದು, ತನ್ನ ಸಾವಿನ ನಂತರವೂ ಅಂದರ ಬದುಕಿಗೆ ಬೆಳಕಾಗಿದ್ದಾನೆ.
ಮಲ್ಲಪ್ಪ ಹರಿಜನ್ ಹಾಗೂ ಸುಜಾತ ಏಕೈಕ ಪುತ್ರನಾದ ಆಕಾಶ್ ಹರಿಜನ್ (10) ಮಾರ್ಚ್ 22 ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದನು. ತಕ್ಷಣವೇ ಆತನನ್ನು ಬಿಜಾಪುರ ನಗರದ ಬಿ,ಎಲ್,ಡಿ,ಇ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ನಿಷ್ಕ್ರಿಯ ಗೊಂಡಿತ್ತು (ಬ್ರೇನ್ ಡೆಡ್) ಮಾರ್ಚ್ 25 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು.
ಈ ದುಃಖದ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಪೋಷಕರು ಮಾನವೀಯತೆಯ ಮಹತ್ವವನ್ನು ಮೆರೆದಿದ್ದಾರೆ, ಮಗನ ಅಂಗಾಂಗ ದಾನ ಮಾಡಲು ಮುಂದಾದರು, ಅಪಘಾತವಾದದ್ದರಿಂದ ಆತನ ಆರೋಗ್ಯ ಸ್ಥಿತಿ ಅನುಕೂಲಕರ ವಾಗಿರದ ಕಾರಣ ಇತರ ಅಂಗಾಂಗಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ “ದೇಹವು ಸುಟ್ಟು ಹೋಗುವ ಬದಲು ಇನ್ನೊಬ್ಬರ ಬದುಕಿಗೆ ಬೆಳಕಾಗಲಿ” ಎಂಬ ಉನ್ನತ ಆಲೋಚನೆಯೊಂದಿಗೆ ಅವರು ನೇತ್ರದಾನ ಮಾಡಲು ನಿರ್ಧರಿಸಿದರು.
ಬಾಲಕ ಮೃತಪಟ್ಟ ಬಳಿಕ ಆತನ ಎರಡು ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದರಿಂದ ಇಬ್ಬರೂ ಅಂದರ ಬದುಕಿಗೆ ಬೆಳಕು ದೊರಕಿದೆ. ಏಕೈಕ ಪುತ್ರನನ್ನು ಕಳೆದು ಕೊಂಡಿದ್ದರು ಸಮಾಜಕ್ಕೆ ಮಾದರಿಯಾಗುವಂತೆ ಈ ನಿರ್ಧಾರ ಎಲ್ಲರ ಮನಸ್ಸನ್ನು ಕಲುಕಿದೆ. ಆಕಾಶ್ ತನ್ನ ತಂದೆ ತಾಯಿಯ ಏಕೈಕ ಮಗನಾಗಿದ್ದು ಇಬ್ಬರೂ ಸಹೋದರಿಯರನ್ನು ಅಗಲಿದ್ದಾನೆ. ಕುಟುಂಬದ ಈ ತ್ಯಾಗ ಮತ್ತು ಮಾನವೀತೆಯ ಎಲ್ಲರಿಂದಲೂ ಪ್ರಂಶಂಸೆಗೆ ಪಾತ್ರವಾಗಿದೆ.
ಈ ಘಟನೆಯ ಹಿನ್ನೆಲೆ ಬಿ,ಎಲ್,ಡಿ,ಇ ಸಂಸ್ಥೆಯ ಆಡಳಿತ ಮಂಡಳಿ ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಕುಟುಂಬದ ನಿರ್ಧಾರವನ್ನು ಶ್ಲಾಗಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿ ಬಾಲಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ವೇಳೆ ರಾಷ್ಟ್ರೀಯ ದೇಹಾಂಗ ಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಪ್ರೀತು ದಶವಂತ ಅವರು ಮೃತ ಬಾಲಕನ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು. ಈ ಘಟನೆ ಸಾವಿನಲ್ಲೂ ಸಾರ್ಥಕತೆ ಸಾಧಿಸಬಹುದೇಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದು, ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ ಈ ಬಾಲಕನ ಮಾನವೀಯ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ
