ನಾಳೆ ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ರಾಜಾಹಂಡೇ – ಹನುಮಪ್ಪ ನಾಯಕನ ಜಯಂತಿ ಜರುಗಲಿದೆ.

ನಿಡಗುಂದಿ ಏ.08

ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇ ವಜೀರ್ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕಾ ಘಟಕ ನಿಡಗುಂದಿ ಸಹಯೋಗದಲ್ಲಿ ಏ, 9 ರಂದು ನಿಡಗುಂದಿ ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ರಾಜಾಹಂಡೇ ಹನುಮಪ್ಪ ಜಯಂತಿ ಜರುಗಲಿದೆ.

ಎಂದು ರಾಜ್ಯ ಘಟಕದ ಅಧ್ಯಕ್ಷ ಡಾ, ಎಸ್,ಎಸ್ ಪಾಟೀಲ್, ಹೇಳಿದರು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ನಿಡಗುಂದಿ ರುದ್ರಮುನಿ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ, ಮುತ್ತಿಗಿ ವೀರ ರುದ್ರಮುನಿ ಶ್ರೀ, ಚಿಮ್ಮಲಗಿ ಸಿದ್ದ ರೇಣುಕಾ ಶ್ರೀ, ಇಟಗಿ ಗುರು ಶಾಂತವೀರ ಶ್ರೀ, ಕರ ಬಂಟನಾಳ ಶಿವಕುಮಾರ್ ಶ್ರೀ, ಬ್ಯಾಲ್ಯಾಳದ ಶ್ರೀಶೈಲ ಮುತ್ಯಾ, ಆಗಮಿಸಲಿದ್ದಾರೆ.

ಸಚಿವ ಶಿವಾನಂದ್, ಎಸ್, ಪಾಟೀಲ್, ಉದ್ಘಾಟಿಸಲಿದ್ದಾರೆ, ಸಿ,ಎಸ್ ನಾಡಗೌಡ, ರಾಜು ಗೌಡ ಪಾಟೀಲ್, ಸೋಮನಗೌಡ ಪಾಟೀಲ್ ಸಾಸನೂರ್, ಎ, ಎಸ್, ಪಾಟೀಲ್ ನಡಹಳ್ಳಿ, ಎಸ್,ಕೆ ಬೆಳ್ಳುಬ್ಬಿ ಪಾಲ್ಗೊಳ್ಳಿಲಿದ್ದಾರೆ. ಸಮಾಜದ ಜಿಲ್ಲಾಧ್ಯಕ್ಷರಾದ ಪ್ರೇಮ್ ಕುಮಾರ್ ಮ್ಯಾಗೇರಿ, ಬಸವರಾಜ್ ವಂದಾಲ್, ಮುದ್ದೇಬಿಹಾಳ ತಾಲೂಕ ಅಧ್ಯಕ್ಷ ಶಂಕರಗೌಡ ಶಿವಣಗಿ, ಬಸವನ ಬಾಗೇವಾಡಿ ಅಧ್ಯಕ್ಷ ಸಿದ್ದನಗೌಡ ಪಾಟೀಲ್, ದೇವರ ಹಿಪ್ಪರಗಿ ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗೌಡ ಗ್ವಾತಗಿ, ಇನ್ನೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button