ದೇವರ ದಾಸಿಮಯ್ಯ ಸಮಾನತೆಯನ್ನು ಸಾರಿದರು – ಜಿ.ಎಚ್ ಶ್ರೀನಿವಾಸ್.

ತರೀಕೆರೆ ಏ.11

ವಚನಕಾರರಲ್ಲಿ ಪ್ರಥಮ ರು ದೇವರ ದಾಸಿಮಯ್ಯ ಕಾಯಕವೇ ಕೈಲಾಸ ಎಂದು ಕಾಯಕದಿಂದ ದೇವರನ್ನು ಕಂಡವರು ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು.

ಅವರು ಇಂದು ಪಟ್ಟಣದ ದುರ್ಗದ ಬೀದಿಯ ಶ್ರೀರಾಮಲಿಂಗ ಚಂದ್ರ ಚೌಡೇಶ್ವರಿ ಸಮುದಾಯ ಭವನದಲ್ಲಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಲಿ ಮಹಿಳಾ ವೇದಿಕೆ ಮತ್ತು ತಾಲೂಕು ದೇವಾಂಗ ಸಮಾಜ ಏರ್ಪಡಿಸಿದ್ದ, ಆದ್ಯ ವಚನಕಾರ ಶರಣ ದೇವಲ ದಾಸಿಮಯ್ಯ ರ 1048ನೇ ಸಂಸ್ಮರಣೆ ಮತ್ತು ವಚನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ವಚನಕಾರರು ಹಾಗೂ ದೇವಲ ದಾಸಿಮಯ್ಯ ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣಬೇಕೆಂದರು ಸಮಾನತೆಯನ್ನು, ಸಾರಿದರು ಅವರ ಆದರ್ಶಗಳನ್ನು ಪಾಲಿಸಿದರೆ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಟ್ಟಳ್ಳಿ ಮಹೇಶ್ ರವರು ಮಾತನಾಡಿ ಮಾದಾರ ಚೆನ್ನಯ್ಯ, ಬಸವಣ್ಣ, ದೇವರ ದಾಸಿಮಯ್ಯ ರವರು ಸರಳವಾಗಿ ಬದುಕಿ ಸಮಾಜದಲ್ಲಿ ಶಾಂತಿ ಸ್ಥಾಪಿಸಿ ಸಂಸ್ಕೃತಿಕ ಸಮಾಜ ನಿರ್ಮಾಣ ಮಾಡಿದವರು. ಮನ ಶುದ್ಧವಾಗಬೇಕು ನುಡಿ ಮತ್ತು ನಡೆಗೆ ವ್ಯತ್ಯಾಸ ವಿರಬಾರದು ಎಂದು ಹೇಳಿದರು.

ಉಪನ್ಯಾಸ ನೀಡಿದ ಪ್ರೊ ಡಾ, ಬಸವರಾಜ ನಲ್ಲಿಸರ ರವರು ಮಾತನಾಡಿ ದಾಸಿಮಯ್ಯರ 150 ವಚನಗಳಲ್ಲಿ ನೂರು ವಚನಗಳು ಸರಳವಾದದ್ದು. ಬದುಕಿದ್ದಾಗ ಸಮಾಜಕ್ಕೆ ಒಳಿತು ಮಾಡಿದರೆ ಸತ್ತಾಗ ನೆನೆಯುತ್ತಾರೆ.

ಸಮಾಜದ ಮುಖಂಡರು ದಾಸಿಮಯ್ಯರವರ ಕುರಿತು ಪುಸ್ತಕಗಳನ್ನು ಹೊರ ತರಬೇಕು ಎಂದು ಹೇಳಿದರು. ದೇವಾಂಗ ಸಮಾಜದ ಅಧ್ಯಕ್ಷರಾದ ಟಿ ಎನ್ ವೆಂಕಟೇಶ್ ಮಾತನಾಡಿ ಸಮಾಜದ ಬಂಧುಗಳು ಸಂಘಟಿತರಾಗಬೇಕು ಒಗ್ಗಟ್ಟಿನಿಂದ ಸಮಾಜದ ಕೆಲಸ ಮಾಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿ ದಾದಾಪೀರ್ ಮಾತನಾಡಿ ದೇವಾಂಗ ಸಮಾಜದವರು ಪಟ್ಟಣದಲ್ಲಿ ವಾಚನಾಲಯಗಳನ್ನು ತೆರೆದಿದ್ದರೂ ಮತ್ತು ಶಾಲೆಯನ್ನು ತೆರೆದಿದ್ದರೂ ಅವು ಮುಚ್ಚಿದ್ದಾವೆ ಮುಖಂಡರಲ್ಲ ಸೇರಿ ಮತ್ತೆ ಶಾಲೆ ಹಾಗು ವಾಚನಾಲಯಗಳನ್ನು ತೆರೆಯಬೇಕು ಎಂದು ಹೇಳಿದರು.

ಸಮಾಜದ ಮುಖಂಡರಾದ ಗೋವಿಂದಪ್ಪ ಮಾತನಾಡಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಉನ್ನತ ವ್ಯಾಸಂಗವನ್ನು ಸಮಾಜದ ವಿದ್ಯಾರ್ಥಿಗಳಿಗೆ ಕುಡಿಸಬೇಕು ಎಂದರು ವೇದಿಕೆಯಲ್ಲಿ ಪಾರ್ವತಮ್ಮ, ಟಿ .ಆರ್ ಶ್ರೀಧರ್, ವಿಜಯ ಪ್ರಕಾಶ್ ಉಪಸ್ಥಿತರಿದ್ದು ದ್ವಿತೀಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದ ನಾಲ್ಕು ಜನ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚೇತನ್ ಗೌಡ ನಿರೂಪಿಸಿ ಸ್ವಾಗತಿಸಿದರು. ರೋಹಿಣಿ ನರಸಿಂಹಮೂರ್ತಿ ಪ್ರಾರ್ಥಿಸಿ, ಪೌರ ಕಾರ್ಮಿಕರಾದ ಪದ್ಮ ವಂದಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button