ದಾವಣಗೇರಿಯಲ್ಲಿ ಅದ್ಧೂರಿಯಾಗಿ ಜರುಗಿದ – “ವಚನ ವೈಭವ” ಕಾರ್ಯಕ್ರಮ.
ದಾವಣಗೆರೆ ಏ.12

ಚೇತನ ಫೌಂಡೇಶನ ವತಿಯಿಂದ ನಗರದ ಸ್ಥಳೀಯ ರೋಟರಿ ಭವನದಲ್ಲಿ ಭಾನುವಾರ “ವಚನ ವೈಭವ” ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಬಸವ ಜಯಂತಿಯ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ವಚನ ಸಾಹಿತ್ಯದ ಮಹತ್ವವನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ ಪರಮೇಶ್ವರಪ್ಪ ಅವರು ಉದ್ಘಾಟಿಸಿ, ವಚನಗಳ ಮೂಲಕ ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಅಧ್ಯಕ್ಷತೆಯನ್ನು ಶ್ರೀ ಪರಮೇಶ್ವರಪ್ಪ.ಎಂ ಸಿರಿಗೆರೆ ವಹಿಸಿ ಕೊಂಡಿದ್ದರು. ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಮಾತನಾಡಿ ಇಂದಿನ ಯುವ ಜನತೆಗೆ ವಚನಗಳ ಸಂದೇಶವನ್ನು ತಲುಪಿಸುವ ಕಾರ್ಯ ಅತ್ಯಂತ ಮುಖ್ಯವೆಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಶಿಕ್ಷಕರು ಸಮಾಜ ಸೇವಕರು ಬಿ.ರಂಗಸ್ವಾಮಿ ಅವರು ಬಸವಣ್ಣನವರ ವಚನಗಳನ್ನು ಬಸವಣ್ಣನವರ ಮತ್ತು 12 ನೇ. ಶತಮಾನದ ಶಿವ ಶರಣರ ವಚನಗಳ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಮತ್ತು ಶರಣ ಶರಣಿಯರ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿ ಕೊಳ್ಳಬೇಕೆಂದು ಮತ್ತು ಸ್ವ ವಿವರವಾಗಿ ಉಪನ್ಯಾಸ ನೀಡಿದರು.

ಬಸವಣ್ಣನ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಸಮಾಜದ ಅಭಿವೃದ್ಧಿಗೆ ದಿಕ್ಕು ತೋರಿಸುತ್ತವೆ ಎಂದು ಹೇಳಿದರು.
ಇದೇ ವೇಳೆ ಶ್ರೀ ಎಸ್.ಎಂ ರವಿಕುಮಾರ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನಿರ ಬೇಕು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪ ಬೇಕೆಂದು ಕಾರ್ಯಕ್ರಮದಲ್ಲಿ ನುಡಿದರು.
ಹಾಗೂ ಯಾಸ್ಮಿನ್.ಬಾನು ಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡರು.
ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ವಚನ ಗಾಯನ, ವಚನ ವಾಚನ, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಮಾರಿ ಅಕ್ಷರ ರೆಡ್ಡಿ 12 ನೇ. ಶತಮಾನದ ಮೊಟ್ಟ ಮೊದಲ ಮಹಿಳಾ ವಚನಕಾರ್ತಿ ಶರಣೆ ಅಕ್ಕಮಹಾದೇವಿ ರೂಪಕ ನೆರೆದಿದ್ದ ಪ್ರೇಕ್ಷಕರನ್ನು ಗಮನ ಸೆಳೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕೊನೆಯಲ್ಲಿ ಸಂಘಟಕರಿಂದ ಎಲ್ಲ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಬಸವ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಬಸವಚೇತನ ರಾಜ್ಯ ಪ್ರಶಸ್ತಿ ಪುರಸ್ಕೃತರು, ಕಾರ್ಯಕ್ರಮದ ಸ್ವಾಗತ ರಾಜೇಂದ್ರಕುಮಾರ್ ಮಠ ಧಾರವಾಡ, ನಿರೂಪಣೆ ವೀರೇಶ್.ಕೆ ಎಸ್ ಪ್ರಸನ್ನ ನಾಡಿಗೇರ್, ಬಾವುಟ ಬಸವರಾಜ್, ಸೇರಿದಂತೆ ಇತರರು ಕನ್ನಡ ಮನಸ್ಸುಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
