ನಿವೃತ್ತ ನೌಕರರ ಭವನದಲ್ಲಿ ಲಿಂಗೈಕ್ಯ ಶರಣರ ನುಡಿದಂತೆ – ನಡೆದ ಶರಣರು.
ಕೊಟ್ಟೂರು ಅ.20

12 ನೇ. ಶತಮಾನದ ಬಸವಾದಿ ಶರಣರ ಆದರ್ಶಗಳನ್ನು ಶ್ರೀ ಎಚ್.ಎಂ ಶರಣಯ್ಯ ನವರು ಮೈಗೂಡಿಸಿ ಕೊಂಡಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ಶ್ರೀ ಕೆ.ಎಂ ಚಿದಾನಂದಯ್ಯನವರು ಹೇಳಿದರು, ಲಿಂಗೈಕ್ಯ ಶ್ರೀ ಶರಣಯ್ಯ ಹಿರೇಮಠ ದತ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು, ಲಿಂಗೈಕ್ಯ ಶ್ರೀ ಶರಣಯ್ಯ ನವರು ತಮ್ಮ ಜೀವನದಲ್ಲಿ ಶರಣ ಸಿದ್ದಾಂತವನ್ನು ಅಪ್ಪಿಕೊಂಡು ಮುನ್ನಡೆದವರು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀ ಡಾ, ಕೆ.ಸಿ ಕುಲಕರ್ಣಿ, ಪ್ರಾಚಾರ್ಯರು, ಟಿ.ಎಂ.ಎ.ಇ ಸಂಸ್ಥೆ, ಗಂಗಾವತಿ ಇವರು ಮಾನವರ ಜೀವನದಲ್ಲಿ ಸಂಸ್ಕಾರ, ಜೀವನ ಮೌಲ್ಯಗಳ ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು. ಶ್ರೀ ಟಿ.ಕೆ ಸಿದ್ದರಾಮೇಶ್ವರ ಶಿಕ್ಷಕರು ಇವರು ಶರಣ ಸಾಹಿತ್ಯ ಪರಿಷತ್ ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗೈಕ್ಯ ಶ್ರೀ ಶರಣಯ್ಯ ಹಿರೇಮಠ ದತ್ತಿಯ ಪರಿಚಯವನ್ನು ಶ್ರೀಮತಿ ಸ್ನೇಹ ಕೆ.ಎಸ್ ಶಿಕ್ಷಕಿ ಇವರು ನಿರ್ವಹಿಸಿದರು. ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ಎಂ ರವಿಕುಮಾರ ರವರು ಈ ರೀತಿಯ ದತ್ತಿ ಕಾರ್ಯಕ್ರಮಗಳಿಂದ ಶರಣ ಸಾಹಿತ್ಯ ಪ್ರಸಾರ ಪ್ರಚಾರ ಮನೆ ಮನೆಗಳಿಗೆ ತಲುಪುವಂತಾಗಿದೆ ಎಂದರು. ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಯುತ ಡಾ, ಕೆ.ರವೀಂದ್ರನಾಥ್ ರವರು ಶ್ರೀಯುತ ಲಿಂಗೈಕ್ಯ ಶರಣಯ್ಯ ಹಿರೇಮಠರವರ ಸೇವೆ ಅನನ್ಯ ವಾದುದು, ಆದರ್ಶ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ನಿವೃತ್ತಿಯ ನಂತರವೂ ಸಹ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು, ತಮ್ಮ ಜೀವನವನ್ನು ಶರಣರ ಹಾದಿಯಲ್ಲಿ ಸಾರ್ಥಕ ಪಡಿಸಿ ಕೊಂಡಿದ್ದರು, ಅವರ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು. ಶ್ರೀ ಅನೂಪ್ ಎಚ್.ಎಂ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀ ಹೊಂಬಾಳೆ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಈಶ್ವರಸ್ವಾಮಿ ಎಚ್.ಎಮ್ ಶರಣು ಸಮರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಶ್ರೀ ದೇವರಮನಿ ಕರಿಯಪ್ಪ ಅಧ್ಯಕ್ಷರು ಕೊಟ್ಟೂರು ತಾಲೂಕಿನ ಸಾಹಿತ್ಯ ಪರಿಷತ್ ಹಾಗೂ ಶ್ರೀ ದೇವರಮನಿ ಕೊಟ್ರೇಶ್ ಅಧ್ಯಕ್ಷರು ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರು ಮಾತನಾಡಿದರು.ಕಾರ್ಯಕ್ರಮವನ್ನು ಲಿಂಗೈಕ್ಯ ಶ್ರೀ ಶರಣಯ್ಯ ಹಿರೇಮಠ ರವರ ಧರ್ಮಪತ್ನಿ ಶ್ರೀಮತಿ ಎಂ.ಸುಜಾತ ಹಾಗೂ ಅವರ ಕುಟುಂಬ ವರ್ಗದವರಾದ ಶ್ರೀ ಸ್ನೇಹ ಕೆ.ಎಸ್, ಶ್ರೀ ಅನೂಪ್ ಎಚ್.ಎಂ, ಶ್ರೀ ಅಜ್ಜಯ್ಯಸ್ವಾಮಿ ಹೆಚ್.ಎಂ, ಶ್ರೀಮತಿ ಅನುಷಾ ಹೆಚ್ ಎಂ, ಶ್ರೀ ಶಾಂತಕುಮಾರಸ್ವಾಮಿ, ಶ್ರೀ ತಿಪ್ಪೇಸ್ವಾಮಿ ಇದ್ದರು.ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ ಸುಜಾತ, ಕಾರ್ಯದರ್ಶಿ ದೇವರಮನಿ ಮಂಗಳ,ಶಸಾಪ ಖಜಾಂಚಿ ಶ್ರೀ ಅಂಗಡಿ ಚಂದ್ರಣ್ಣ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು