ಲಕ್ಷ್ಮಣ ಬಸರಗಿ ತೋಟದಲ್ಲಿ ಬೃಹತ್ ಆಕಾರದ ಮೊಸಳೆ ಪ್ರತ್ಯಕ್ಷ.
ತೊದಲಬಾಗಿ ಅ.20

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಲಕ್ಷ್ಮಣ ಬಸರಗಿ ಅವರ ತೋಟದಲ್ಲಿ ಬೃಹತ್ ಆಕಾರದ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಯಿತು. ಮೊದಲು ಈ ಮೊಸಳೆಯನ್ನು ಲಕ್ಷ್ಮಣ್ ಬಸರಗಿ ನೋಡಿ ಸಾರ್ವಜನಿಕ ಮಾಹಿತಿ ನೀಡಿದರು ತೊದಲಬಾಗಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ನಾರಾಯಣ ಕದಂ ಅವರು ಅರಣ್ಯ ಅಧಿಕಾರಿಗಳಿಗೆ ಪ್ರತ್ಯಕ್ಷವಾದ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರ ಸಹಾಯದಿಂದ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿದರು. ಇದರಿಂದ ಗ್ರಾಮಸ್ಥರಲ್ಲಿ ಸಮಾಧಾನ ದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಊರಿನ ಪ್ರಮುಖರಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾರಾಯಣ ಕದಂ ಮಾಜಿ ಸೈನಿಕರಾದ ಶ್ರೀಧರ್ ಕಾಸರ ಸಾಮಾಜಿಕ ಹೋರಾಟಗಾರರಾದ ಮಾಂತೇಶ್ ಬಸರಗಿ, ರಾಮಪ್ಪ ಬಸರಗಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಶೋಕ್ ಹಾದಿಮನಿ ಮುಂತಾದವರು ಅರಣ್ಯ ಅಧಿಕಾರಿಗಳ ಸಿಬ್ಬಂದಿಗಳಿಗೆ ಧನ್ಯವಾದಗಳು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ