ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ – ಆಪತ್ತು ನಿರ್ವಹಣಾ ಶಿಬಿರ.
ರಾಯಚೂರು ಅ.23




ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆಯ ಸಹಕಾರದೊಂದಿಗೆ “ಯುವ ಆಪದ್ ಮಿತ್ರ” ಯೋಜನೆ ಯಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಯಚೂರು ಜಿಲ್ಲೆಯ ರೋವರ್ಸ್ – ರೇಂಜರ್ಸ್, ದಳನಾಯಕರುಗಳಿಗೆ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಡಾ, ಆನಿಬೆಬೆಂಟ್ ಸ್ಕೌಟ್ ಮತ್ತು ಗೈಡ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುತ್ತಿದ್ದು. ಮಾನ್ಯ ಶ್ರೀ ಪಿ.ಜಿ.ಆರ್ ಸಿಂಧ್ಯ ರಾಜ್ಯ ಮುಖ್ಯ ಆಯುಕ್ತರು ರವರ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ನಾಗರಾಜ ಜಿಲ್ಲಾ ಮುಖ್ಯ ಆಯುಕ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ರವರು ಆಗಮಿಸಿದ್ದರು.
ಈ ಶಿಬಿರದ ನಾಯಕಿ ಶ್ರೀಮತಿ ಲತಾ ಮಂಜುನಾಥ ರಾಜ್ಯ ವಿಪತ್ತು ನಿರ್ವಹಣಾ ಸಂಯೋಜಕರು, ಸಂಘಟಕರು ಶ್ರೀಮತಿ ಮಲ್ಲೇಶ್ವರಿ ಜುಜಾರೆ ASOC/ರೇಂಜರಿಂಗ್ ವಿಭಾಗ/ಕಲ್ಯಾಣ ಕರ್ನಾಟಕ ಉಸ್ತುವಾರಿ, ಶ್ರೀ ಅಂಬಣ್ಣ ನಾಯಕ ಎಸ್.ಜಿ.ವಿ ರವರು ರಾಜ್ಯ ಸಂಸ್ಥೆಯ ಸಿಬ್ಬಂದಿಗಳಾಗಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ.ಈ ಶಿಬಿರದಲ್ಲಿ ರೋವರ್ಸ್ – 212, ರೇಂಜರ್ಸ್ – 268, ದಳನಾಯಕರು, ಒಟ್ಟು ರಾಯಚೂರ ಜಿಲ್ಲೆಯಿಂದ:480 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕಾಲೇಜುಗಳಿಂದ ರೋವರ್ಸ್ ಸ್ಕೌಟ್ ಲೀಡರ್ಸ್ – 02 ಹಾಗೂ ರೇಂಜರ್ ಲೀಡರ್ಸ್ – 03 ಜನ ಭಾಗವಹಿಸಿದ್ದಾರೆ. ಮಾನ್ವಿ ನಗರದ ವಿವಿಧ ಕಾಲೇಜಿನಿಂದ ಸುಮಾರು 101 ವಿದ್ಯಾರ್ಥಿಗಳು ಭಾಗಿ ಯಾಗಿದ್ದಾರೆ. ಭಾಗಿಯಾದ ಎಲ್ಲರಿಗೂ ಆಪತ್ತು ನಿರ್ವಹಣೆ ಕಿಟ್ ಮತ್ತು ಪ್ರಮಾಣ ಪಾತ್ರ ನೀಡಲಾಯಿತು. ಎಲ್ಲಾ ಭಾಗವಹಿಸಿದ ರೇಂಜರ್ ರೋವರ್ಗಳಿಗೆ ಪ್ರಾಂಶುಪಾಲರು ಜಿಲ್ಲಾ ಸ್ಕೌಟ್ ಗೈಡ್ ಅಧಿಕಾರಿಗಳು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ