ಬರದ ಜಿಲ್ಲೆಗೆ ಬಾರದ ಮಳೆ ಬಂದು – ರೈತರಿಗೆ ಸಂತೋಷ ತಂದಿತು.
ಆಲಮೇಲ ಆ.05




ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಅನ್ನದಾತರು ಆಕಾಶ ದತ್ತ ಮುಖ ಮಾಡಿ ವರುಣರಾಯನ ಆಗಮನಕ್ಕಾಗಿ ಕಾದು ಕಾದು ಸುಸ್ತಾಗಿ ತಲೆ ಮೇಲೆ ಕೈ ಇಟ್ಟು ಕುಳಿತಿರುವ ರೈತರ. ಮುಂಗಾರು ಬೆಳೆಗೆ ಸಂಜೀವಿನಿಯಾದ ಮಳೆರಾಯ ನಿನ್ನೆ ರಾತ್ರಿ ಕೃಪೆ ತೋರಿದಕ್ಕೆ ರೈತರ ಸಂತಸ ಮುಗಿಲು ಮುಟ್ಟಿತು.

ತೊಗರಿ ಹತ್ತಿ ಕಬ್ಬು ಹೆಸರು ಉದ್ದು ಹಲವು ರೀತಿಯ ಮುಂಗಾರು ಬಿತ್ತನೆಯ ಮಾಡಿರುವ ರೈತರಿಗೆ ಹರ್ಷ ತುಂಬಿದೆ ದೇಶಕ್ಕೆ ಅನ್ನದಾತನಾದ ರೈತ ಮಳೆ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಕಾತುರದಿಂದ ಕಾಯುತ್ತಿರುವ ಸಮಯದಲ್ಲಿ ವರುಣ ರಾಜನ ಕೃಪೆ ರೈತರ ಮತ್ತು ಜಾನುವಾರುಗಳ ಮೇಲೆ ಇರುವುದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರಾತ್ರಿ ಆಲಮೇಲ ತಾಲೂಕಿನಲ್ಲಿ ಬಂದಿರುವ ಮಳೆ. ಸಾತನ್ ಗೌಡ ಬಿರಾದರ್, ಪಿ.ಕೆ.ಪಿ.ಎಸ್ ಸದಸ್ಯರು ಕಡಣಿ ಮಳೆ ಬಂದಿರೋದು ಪ್ರತಿಯೊಬ್ಬ ರೈತರಿಗೆ ಆಶ್ಲೇಷಾ ಮಳೆ ಸಂತೋಷದ ತಂದಿದೆ ಎಂದು ಹೇಳಿದರು.
ತಾಲೂಕು ವರದಿಗಾರರು, ಸಿಹಿಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ನೂಸ್ಜ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

