ಚನ್ನಬಸು ದೊಡ್ಡಮನಿ ಯವರಿಗೆ ರಾಜ್ಯ ಮಟ್ಟದ – ಬಸವ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕುಮಸಗಿ ಫೆ.16

ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ ಶಿಕ್ಷಕ, ಸಾಹಿತಿ ಚನ್ನಬಸು ದೇವೇಂದ್ರ ದೊಡ್ಡಮನಿ ಅವರಿಗೆ ರಾಜ್ಯ ಮಟ್ಟದ ಬಸವ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಚನ್ನಬಸು ದೊಡ್ಡಮನಿ ಅವರ ಸಾಹಿತ್ಯ, ಸಂಸ್ಕೃತಿ ಸಂಗೀತ, ರಂಗಭೂಮಿ, ಸಾಮಾಜಿಕ ಕಳಕಳಿಯ ಕಾರ್ಯಗಳ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಚನ್ನಬಸು ಅವರ ಈ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳು ಶಿಕ್ಷಣ ವಲಯದ ಹಿರಿಯರು ಹಾಗೂ ಸ್ನೇಹಿತರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ. ಜಿ ಹಿರೇಮಠ ಆಲಮೇಲ
