ಪೊರಕೆಗೂ ಗೌರವದ ಸ್ಥಾನ ನೀಡಬೇಕು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಫೆ.16

ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಪ್ರತಿ ನಿತ್ಯ ಉಪಯೋಗಿಸುವ ಕಸ ಹೊಡೆಯುವ ಪೊರಕೆಯನ್ನೂ ಸಹ ಗೌರವ ಭಾವದಿಂದ ಕಾಣಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಕಿವಿಮಾತು ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶಾರದಾಮಾತೆಯವರ ಸಂದೇಶಗಳ” ಬಗ್ಗೆ ವಿಶೇಷ ಪ್ರವಚನ ನೀಡಿದರು.

ಶ್ರೀಮಾತೆಯವರು ಹೇಳಿದಂತೆ ಸದಾ ಕಾರ್ಯ ಚಟುವಟಿಕೆ ಯಿಂದ ದೇಹ ಮತ್ತು ಮನಸ್ಸು ಪ್ರಫುಲ್ಲವಾಗಿರುತ್ತದೆ. ಕೆಲಸಗಳನ್ನು ನಿಷ್ಕಾಮ ಕರ್ಮ ದಿಂದ ಫಲಾಪೇಕ್ಷೆಯಿಲ್ಲದೆ ಮಾಡಬೇಕು.

ಸಣ್ಣ ಸಣ್ಣ ಕೆಲಸಗಳನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು ಎಂದರು.

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಕುಮಾರಿ ಪ್ರತೀಕ್ಷಾ ಅವರಿಂದ ಶ್ರೀಮದ್ ಭಗವದ್ಗೀತೆಯ ಕರ್ಮ ಯೋಗದ ಶ್ಲೋಕಗಳ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ಅಂಬುಜಾ, ಚೆನ್ನಕೇಶವ, ಚೇತನ್, ಸುದೀಪ್, ಶ್ರೀನಿವಾಸ್, ಸಿ.ಎಸ್ ಭಾರತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ಯತೀಶ್ ಎಂ ಸಿದ್ದಾಪುರ, ವೆಂಕಟೇಶ್, ಗೀತಾ ವೆಂಕಟೇಶ್ ರೆಡ್ಡಿ, ಪಂಕಜಾ, ರತ್ನಮ್ಮ ಚೆನ್ನಬಸಪ್ಪ, ವನಜಾಕ್ಷಿ, ರಶ್ಮಿ, ಯಶಸ್ವಿ, ಅನ್ವಿಕಾ, ಮಂಜುಳಾ ಉಮೇಶ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button