ಎಸ್.ಹೆಚ್ ಶಫಿವುಲ್ಲಾ ಅವರಿಗೆ ಒಲಿದ ರಾಷ್ಟ್ರಮಟ್ಟದ – ಸಾಹಿತ್ಯ ರತ್ನ ಪ್ರಶಸ್ತಿ.

ಚಿತ್ರದುರ್ಗ ಫೆ.22

ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಬೆಳಕು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್ ಇವರ ಸಹಯೋಗದಲ್ಲಿ ಸಾಹಿತಿ ಹಿರಿಯೂರಿನ ಉಪನ್ಯಾಸಕ ಹಾಗೂ ಸಾಹಿತಿ ಡಾ, ಎಸ್.ಎಚ್ ಶಫಿವುಲ್ಲಾ ಇವರಿಗೆ ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಷ್ಟ್ರ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇವರು ಸಂಧ್ಯಾರಗಳೆ ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನ, ಕಣ್ಮರೆ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದಾರೆ.

ಬೆಳಗು ಭಾವ ಎಂಬ ಶೀರ್ಷಿಕೆಡಿಯಲ್ಲಿ 1500 ಕ್ಕೂ ಹೆಚ್ಚು ಪದ್ಯಗಳನ್ನು ಬರೆದಿದ್ದಾರೆ. ಇದರ ಬೆನ್ನಲ್ಲೇ ಕುಟೀಶನ ಕುಂಟೆ ಎಂಬ ಮುಕ್ತಕಗಳ ಸಂಕಲನ ಮುದ್ರಣ ಹಂತದಲ್ಲಿದೆ.

ಹಾಗೆಯೇ ಮತ್ತೊಂದು ಕವನ ಸಂಕಲನ, ಕಥಾ ಸಂಕಲನ ಹಾಗೂ ಬಿಡಿ ಲೇಖನಗಳ ಸಂಕಲನ ಮುದ್ರಣಕ್ಕೆ ಸಿದ್ದ ಗೊಂಡಿವೆ.

ಪ್ರಸ್ತುತ ಈ ಪ್ರಶಸ್ತಿಯನ್ನು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಾರ್ಚ್ 1 ರಂದು ನಡೆಯುವ ರಾಷ್ಟ್ರ ಮಟ್ಟದ ಕಲಾ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು ಎಂದು ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯ ಸಂಸ್ಥಾಪಕರಾದ ರಾಜು ಸೂಲೇನಹಳ್ಳಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button