ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ – ರೈತರ ಗೋಳು ಕೇಳುವರ್ಯಾರಯ್ಯ…?

ತರೀಕೆರೆ ಮಾ.04

ನೂರಾರು ಟ್ರ್ಯಾಕ್ಟರ್ ಗಳಲ್ಲಿ ರಾಗಿ ತಂದು ಮೂರು ದಿನಗಳಿಂದ ಎ.ಪಿ.ಎಂ.ಸಿ ಯಾರ್ಡ್ ನಲ್ಲಿ ರೈತರು ಬೆಳೆದಿರುವ ರಾಗಿಯನ್ನು ತಂದು ಕಾಯುತ್ತಿದ್ದಾರೆ ರಾಗಿ ಖರೀದಿ ಕೇಂದ್ರದ ವ್ಯವಸ್ಥಾಪಕರು ರೈತರ ಗೋಳು ಕೇಳುತ್ತಿಲ್ಲ ಕೇವಲ 13 ಟ್ರ್ಯಾಕ್ಟರ್ ಗಳ ರಾಗಿ ಮಾತ್ರ ಒಂದು ದಿವಸಕ್ಕೆ ತುಂಬಲಾಗುತ್ತಿದೆ ಇದರಿಂದ ನೂರಾರು ಟ್ಯಾಕ್ಟರ್ ರಾಗಿ ತಂದಿರುವ ರೈತರು ಸೊಳ್ಳೆಗಳ ಪಾಲಿಗೆ ಬಲಿಯಾಗಿದ್ದಾರೆ ಚಳಿಗಾಳಿ ಎನ್ನದೆ ಕಂಗಲಾಗಿದ್ದಾರೆ.

ಸರ್ಕಾರ ಮತ್ತು ಖರೀದಿ ಕೇಂದ್ರದ ಅಧಿಕಾರಿಗಳು ಗಮನ ಹರಿಸಿ ರೈತರ ತಂದಿರುವ ರಾಗಿಯನ್ನು ಆದಷ್ಟು ಬೇಗ ಖರೀದಿ ಮಾಡಿದರೆ ರೈತರ ಸಂಕಷ್ಟ ಬಗೆಹರಿಯುತ್ತದೆ. ಅಜ್ಜಂಪುರ ಎ.ಪಿ.ಎಂ.ಸಿಯಲ್ಲಿ 7 ಲಾರಿಗಳಲ್ಲಿ ರಾಗಿ ಖರೀದಿ ಮಾಡಿ ತುಂಬಿಸಲಾಗುತ್ತಿದೆ ತರೀಕೆರೆಯಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ರೈತರು ಕೇಳಿದರೆ ಲಾರಿಗಳು ಇಲ್ಲ ಎಂದು ಉತ್ತರ ಕೊಡುತ್ತಿದ್ದಾರೆ ರೈತರ ಕಷ್ಟಕ್ಕೆ ಅಧಿಕಾರಿಗಳು ಸರ್ಕಾರ ಸ್ಪಂದಿಸ ಬೇಕಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button