ಶ್ರೀಶೈಲ ಪಾದಯಾತ್ರೆಗಳಿಗೆ ಪ್ರಸಾದ ವಿತರಿಸಿದ – ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್ ಸಿಬ್ಬಂದಿಯವರು.
ಗೊರಬಾಳ ಮಾ.03

ಇಳಕಲ್ಲ ತಾಲೂಕಿನ ಸಮೀಪದ ಗೊರಬಾಳ ಗ್ರಾಮದಲ್ಲಿ ಮಲ್ಲಯ್ಯನ ಕಂಬಿ ಪೂಜೆಯೊಂದಿಗೆ ಪ್ರಾರಂಭವಾಗುವ ಪ್ರಸಾದಕ್ಕೆ ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕ್ ಸಿಬ್ಬಂದಿ ವರ್ಗದವರು ವಿಜಯಕುಮಾರ ಗೌಡರ ರವರು ಗದಗ ಜಿಲ್ಲೆ ನರಗುಂದ ತಾಲೂಕ ಕೊಣ್ಣೂರ ಗ್ರಾಮದ ಸುಮಾರು 300 ಜನ ಪಾದಯಾತ್ರೆಗಳಿಗೆ ಪ್ರಸಾದ ವಿತರಣೆ ಮಾಡಿದರು.


ಸುಮಾರು ಐದು ವರ್ಷಗಳಿಂದ ಪ್ರಸಾದ ವಿತರಣೆ ಮಾಡುತ್ತಿರುವ ವಿಜಯಕುಮಾರ ಅವರು ತಮ್ಮ ನೌಕರಿಯಿಂದ ಬರುವ ಅಲ್ಪ ವೇತನದಲ್ಲಿಯೇ ಪ್ರತಿ ವರ್ಷ ಸುಮಾರು ಮೂರು ಊರಿನ ಪಾದಯಾತ್ರೆಗಳಿಗೆ ಪ್ರಸಾದ ವ್ಯವಸ್ಥೆ ಮಾಡಿಸುತ್ತಿದ್ದು.

ಗೊರಬಾಳ ಗ್ರಾಮದಲ್ಲಿ ಸಾಕಷ್ಟು ಅನುಕೂಲಸ್ಥರು ಇದ್ದರೂ ಸಹ ಖಾಸಗಿ ಬ್ಯಾಂಕಿನ ಸಿಬ್ಬಂದಿಯೊಬ್ಬರು ಅನ್ನದಾನ ಮಾಡಿ ಭಕ್ತಿ ಸೇವೆ ಮೆರೆಯುತ್ತಿರುವುದು ಶ್ರೀಶೈಲ ಮಲ್ಲಯ್ಯನ ಭಕ್ತಿ ಎತ್ತಿ ತೋರಿಸುತ್ತದೆ ಸಾಕಷ್ಟು ಅನುಕೂಲಸ್ಥರಿದ್ದರೂ ಅನ್ನದಾನ ಸೇವೆ ಮಾಡುವ ಮನಸ್ಸು ಇರುವವರು ತುಂಬಾ ಕಡಿಮೆ ಅಂತದರಲ್ಲಿ ಈ ಬ್ಯಾಂಕ್ ನೌಕರ ಪಾದಯಾತ್ರೆಗೆ ಬರುವ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದು ಆಶ್ಚರ್ಯ ಪಡುವಂತಿದೆ. ಎಂದು ಕೊಣ್ಣೂರಿನ ಭಕ್ತರು ಹೇಳಿದರು.

ಪ್ರತಿ ವರ್ಷ ವಿವಿಧ ತರದ ಪ್ರಸಾದ ಮಾಡಿಸುತ್ತಿರುವುದು ಮತ್ತೊಂದು ವಿಶೇಷ ಎಂದು ಹೇಳುತ್ತಾ ಇದಕ್ಕೆಲ್ಲ ಮೂಲ ಕಾರಣವೇ ಶ್ರೀಶೈಲದ ಮಲ್ಲಯ್ಯ ಒಬ್ಬ ಖಾಸಗಿ ನೌಕರರಲ್ಲಿ ಸೇವೆ ಮಾಡುವ ಇಚ್ಛಾ ಶಕ್ತಿ ತುಂಬಿದ್ದಾನೆ ಇದು ಎಲ್ಲಾ ಮಲ್ಲಯ್ಯನ ಕೃಪೆ ಎಂದು ಹೇಳಿದರು.


ಆಗಮಿಸಿದ್ದ ಭಕ್ತರಿಗೆ ರೊಟ್ಟಿ ಪಲ್ಲೆ ಗೋಧಿ ಹುಗ್ಗಿ ಮಸೂರು ಮಜ್ಜಿಗೆ ಮಲ್ಲಯ್ಯನಿಗೆ ಇಷ್ಟವಾದ ಅಂಬಲಿ ಕಲ್ಲಂಗಡಿ ಹಣ್ಣು ದ್ರಾಕ್ಷಿ ಹಣ್ಣು ನೀಡುವುದರ ಜೊತೆಗೆ ಆಗಮಿಸಿದ್ದ ಭಕ್ತರಿಗೆ ವೈದ್ಯಕೀಯ ಸೇವೆ ಆಯೋಜಿಸಿದ್ದರು.

ಒಬ್ಬನ ವ್ಯಕ್ತಿ ಇಷ್ಟೆಲ್ಲ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದು ಕಂಡ ಮಲ್ಲಯ್ಯನ ಭಕ್ತರು ಮನಸಾರೆ ಪ್ರಸಾದ ಸ್ವೀಕರಿಸಿ ಮಲ್ಲಯ್ಯನ ಅನುಗ್ರಹ ವಿಜಯ ಅವರ ಮೇಲೆ ಇರಲಿ ಎಂದು ಆಶೀರ್ವದಿಸಿದರು ಎಂದು ವರದಿಯಾಗಿದೆ.

