2026 ರ ಸಾಲಿನ‌ ರಾಜ್ಯ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗುವಂತಾಲಿ – ರಾಜ್ಯ ಸರ್ಕಾರಕ್ಕೆ ಡಾ, ಎಂ.ಬಿ ಹಡಪದ ಒತ್ತಾಯದ ಆಗ್ರಹ.

ಕಲಬುರಗಿ ಮಾ.04

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇದೇ ಮಾಚ್ – 6 ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ಈ 2026 -27 ನೇ. ಸಾಲಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗುವಂತಾಗಲಿ..? ಈಗಾಗಲೇ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದ್ದು.

ಈ ನಿಗಮಕ್ಕೆ ೧೦೦ ಕೋಟಿ ರೂ‌. ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ. ಈ ನಿಗಮದಿಂದ ಸಮಾಜದ ಜನತೆಗೆ ಆಸರೆಯಾಗಲಿ..? ನಿಗಮ ಮುಖಾಂತರ ಹಡಪದ ಅಪ್ಪಣ್ಣ ಕ್ಷೌರಿಕರಿಗೆ ಲೋನ್ (ಸಾಲ) ಸಿಗಲಿ. ಎಂಬುದು ಈ ಸಮಾಜದ ಒತ್ತಾಸೆಯಾಗಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಸಾಹೇಬ್ರು ಮತ್ತು ಅನೇಕ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು. ಶಾಸಕರು. ವಿಧಾನ ಪರಿಷತ್ ಸದಸ್ಯರು. ಈ ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿ. ಮತ್ತು ಈ ಕಾಯಕ ಸಮಾಜವನ್ನು ಕಡೆಗಣಿಸದ್ದೀರಿ..?

ಈ ಸಮಾಜಕ್ಕೆ ನ್ಯಾಯ ಸಿಗಲೇಬೇಕು..? ಹಾಗೇಯೇ ಬಸವ ಕಲ್ಯಾಣದಲ್ಲಿ ಇರುವ ಬಸವಣ್ಣನವರ ಗವಿ (ಅರಿವಿನ) ಮನೆಯ ಪಕ್ಕದಲ್ಲಿ ಹಡಪದ ಅಪ್ಪಣ್ಣ ನವರ ಗವಿ (ಅರಿವಿನ ಮನೆಯನ್ನು) ಬಿ.ಕೆ.ಡಿ.ಬಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಬೇಕು.

ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ‌ಹಾಗೂ ದೇಗಿನಾಳ ಗ್ರಾಮದಲ್ಲಿ ಇರುವ ಹಡಪದ ಲಿಂಗಮ್ಮ ನವರ ಜನ್ಮ ಸ್ಥಳವನ್ನು ಬಸವನ ಬಾಗೇವಾಡಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಲಾಗುವುದು‌. ಮತ್ತು ಕಲಬುರಗಿ ಜಿಲ್ಲೆಯ ವಿಶ್ವ ವಿದ್ಯಾಲಯದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ ಪ್ರತ್ಯೇಕ ಕಟ್ಟಡದ ಅಭಿವೃದ್ಧಿ ಗೇ 10. ಕೋಟಿ ರೂಪಾಯಿಗಳು ನೀಡಬೇಕು.

ಮತ್ತು ಈ ಹಡಪದ ಅಪ್ಪಣ್ಣ ಸಮಾಜಕ್ಕೆ ಪರ್ಯಾಯ ಪದವಾದ ನಾಯಿಂದ ಉಪ ಜಾತಿಯನ್ನು ಮುಂದುವರೆಸಿ ಕೊಂಡು ಹೋಗುವ ಕೆಲಸ ಆಗಬೇಕು. ಈ ನಾಯಿಂದ ಉಪ ಜಾತಿಯಲ್ಲಿ ಬರುವ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ರಾಜ್ಯದಾದ್ಯಂತ ಅನೇಕ ಗ್ರಾಮೀಣ ಭಾಗದಲ್ಲಿ ಇರುವ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ “ಕ್ಷೌರ ಕುಟೀರಗಳು’ ನೀಡುವಂತೆ ಮತ್ತು ಸಮಾಜದ ಜನತೆಯು ಯಾವುದೇ ಗ್ರಾಹಕರು ಬರಲಿ ಅವರಿಗೆ ಯಾವುದೇ ರೋಗ ರುಜಿಣಗಳು ರೋಗದ ಲಕ್ಷಣಗಳು ಇದ್ದರು ಸಹ ಅವರಿಗೆ ಕ್ಷೌರ ಸೇವೆ ಸಲ್ಲಿಸುತ್ತಾರೆ.

ಈ ಕ್ಷೌರಿಕ ಕುಟುಂಬಕ್ಕೆ ಈ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಆರೋಗ್ಯ ಹಿತ ದೃಷ್ಟಿಯಿಂದ ಆರೋಗ್ಯ ವಿಮೆ. ಮತ್ತು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಇಲಾಖೆಯ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ನೀಡುವಂತೆ ಮನವಿ‌. ಮತ್ತು ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜಕ್ಕೆ ಅನ್ಯಾಯ ವಾಗದಿರಲಿ..?

ಇನ್ನೂ ಈ ಹಡಪದ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ ಇದೇ ಚಳಿಗಾಲದ ಅಧಿವೇಶನದಲ್ಲಿ ಸಹ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ತಾಲೂಕಿನ ಶಾಸಕರಾದ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ನವರು ಸಹ ಸದನದಲ್ಲಿ ಈ ಸಣ್ಣ ಸಣ್ಣ ಸಮುದಾಯದ ಪರವಾಗಿ ವಿಧಾನ ಸಭೆಯ ಕಲಾಪದಲ್ಲಿ ಗಟ್ಟಿ ಧ್ವನಿಯಾಗಿ ಈ ಸಮಾಜಕ್ಕೆ ಮತ್ತು ಈ ಹಡಪದ ಅಪ್ಪಣ್ಣ ನಿಗಮಕ್ಕೆ ಹಣ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಮೂಲಕ ಚರ್ಚೆ ಮಾಡಿದರು.

ಮತ್ತು ಇನ್ನೂ ಅನೇಕ ಶಾಸಕರು ಈ ಸಮಾಜದ ಪರವಾಗಿ ಧ್ವನಿಯಾಗದೆ ಅನ್ಯಾಯ ವಾಗಿದೆ..? ಬರೀ ನಿಮಗೆ ಸಮಾಜದ ಮತಗಳು ಚುನಾವಣೆಯಲ್ಲಿ ಪಡೆದು ಈಗ ಈ ಸಮಾಜಕ್ಕೆ ಮೀಸಲಾತಿ ನೀಡದೆ ಇದ್ದರೆ ಹೇಗೆ..? ಈ ಸಮಾಜವನ್ನು ಪರಿಗಣಿಸಿ.

ಈ ಹಿಂದುಳಿದ ಸಮಾಜವನ್ನು ಎಸ್ಸಿ ಗೆ ಅಥವಾ ಎಸ್ಟಿ ಗೆ ಸೇರಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ..? ಈ ಸಣ್ಣ ಸಣ್ಣ ಸಮುದಾಯವು ಅಭಿವೃದ್ದಿಯಗೆ ನ್ಯಾಯ ಸಿಗಲಿ. ತಾವು ಇದೇ ಮಾರ್ಚ-೬ ರಂದು ಮಂಡನೆ ಮಾಡಲಿರುವ ರಾಜ್ಯ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ ಆಗದಿರಲಿ‌..?

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಎಷ್ಟರ ಮಟ್ಟಿಗೆ ಅನ್ನುವುದು ಹುಸಿಯಾ ಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಕಲಬುರ್ಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಸಂಘಟನಾ ಕಾರ್ಯದರ್ಶಿಗಳು ಡಾ, ಮಲ್ಲಿಕಾರ್ಜುನ.ಬಿ‌ ಹಡಪದ ಸುಗೂರ.ಎನ್ ಒತ್ತಾಯದ ಆಗ್ರಹವಾಗಿದೆ ಎಂದು ವರದಿಯಾಗಿದೆ. ‌ ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button