ಯುವ ಜನಾಂಗ ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು – ಅಭಿಷೇಕ್ ಚಕ್ರವರ್ತಿ.
ಚಳ್ಳಕೆರೆ ಮಾ.09

ಪ್ರತಿಯೊಬ್ಬ ಯುವಕ ಯುವತಿಯರು ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಚಾರಿತ್ರ್ಯವಂತ ವ್ಯಕ್ತಿತ್ವವನ್ನು ರೂಪಿಸಿ ಕೊಂಡು ಸದೃಢ ರಾಷ್ಟ್ರವನ್ನು ಕಟ್ಟಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಅಭಿಷೇಕ್ ಚಕ್ರವರ್ತಿ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಭಾರತದ ಬೆನ್ನೆಲುಬು ಆಧ್ಯಾತ್ಮಿಕತೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿ ದಿವ್ಯತ್ರಯರಿಗೆ ಮಂಗಳಾ ರತಿಯನ್ನು ನಡೆಸಿ ಕೊಟ್ಟರು. ಕೊನೆಯಲ್ಲಿ ಸಂನ್ಯಾಸಿ ಗೀತೆಯ ಗಾಯನ ನಡೆಯಿತು.

ತರಗತಿಯಲ್ಲಿ ಚೇತನ್, ಲೋಹಿತ್, ಮಾನ್ಯ, ಪುಷ್ಪಲತಾ, ಮಂಜುಳಾ ಉಮೇಶ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
