ವಿಶ್ವ ಶಾಂತಿಗಾಗಿ ಹೋಮ ಮತ್ತು ಪ್ರಾರ್ಥನೆ – ಆರ್,ದೇವಾನಂದ್.
ತರೀಕೆರೆ ಮಾ.10

ಯುದ್ಧ ನಿಲ್ಲುವಂತೆ ಪ್ರಾರ್ಥಿಸಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಪಡೆದಿರುವ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಹೋಮ ಮಾಡಿಸುತ್ತೇವೆ ಎಂದು ಮ್ಯಾಮ್ ಕೋಸ್ ಮಾಜಿ ನಿರ್ದೇಶಕರಾದ ಡಾ, ಆರ್ ದೇವಾನಂದ ರವರು ಹೇಳಿದರು.
ಅವರು ಇಂದು ಪಟ್ಟಣದ ಚಿಕ್ಕಕೆರೆ ಪಕ್ಕದಲ್ಲಿರುವ ಪ್ರಸನ್ನ ರಾಮೇಶ್ವರ ದೇವಸ್ಥಾನದಲ್ಲಿ ಯುದ್ದ ನಿಲ್ಲಿಸಲು ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡಿ ಮಾತನಾಡಿದರು. ಮ್ಯಾಮ್ ಕೂಸ್ ನಿರ್ದೇಶಕರಾದ ಟಿ.ಎಲ್ ರಮೇಶ್ ಮಾತನಾಡಿ ಜಗತ್ತಿನ ಎಲ್ಲಾ ದೇಶಗಳಲ್ಲಿ ಶಾಂತಿ ನಡೆಸಬೇಕು ಎಂದು ಹೇಳಿದರು.
ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಟಿ.ಎನ್ ಚೇತನ್ ಉಪಾಧ್ಯಕ್ಷರಾದ ಉದೇಶ ಕಾರ್ಯದರ್ಶಿ ಟೀ ಮಂಜುನಾಥ್, ಸಹ ಕಾರ್ಯದರ್ಶಿ ಟಿ ಎಚ್ ನಾಗರಾಜ್, ಖಜಾಂಚಿ ಆರ್ ಎಂ ಶ್ರೀನಿವಾಸ್, ಸದಸ್ಯರಾದ ಬಿವಿ, ಯೋಗೇಶ್,ಟಿವಿ ಬಸವರಾಜ್, ಗೋವರ್ಧನ್, ನೀಲಕಂಠಪ್ಪ,ಟಿಎಸ್ ಧರ್ಮರಾಜ್, ನಾಗಭೂಷಣ್ ರವರು ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದೇವೆ ಆಸಕ್ತರು ಕಟ್ಟಡದ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲು ಕೋರಿದರು.ಹಾಗೂ ಪ್ರತಿ ಸೋಮವಾರ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಅರ್ಚಕರಾದ ಸತೀಶ್ ಮತ್ತು ರೇಣುಕಾ ದೇವಾನಂದ್, ರಶ್ಮಿ. ರಮೇಶ್, ಹಾಗೂ ನೂರಾರು ಜನ ಭಕ್ತರು ಉಪಸ್ಥಿತರಿದ್ದು ಅನ್ನ ಸಂತರ್ಪಣೆ ಯಲ್ಲಿ ಭಾಗವಹಿಸಿರುತ್ತಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು
