ರೂಡಗಿ ಗ್ರಾಮದಲ್ಲಿ ಮಾರ್ಚ್ 10 – ರಿಂದ ಪ್ರವಚನ ಪ್ರಾರಂಭ.

ರೂಡಗಿ ಮಾ.11

ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಮಾರ್ಚ್ 15 ರ ವರೆಗೆ ಅದ್ದೂರಿಯಾಗಿ ನಡೆಯುತ್ತದೆ. ಮಾರ್ಚ್ 10 ಮಂಗಳವಾರ ದಂದು ಮುಂಜಾನೆ 10:00 ಗಂಟೆಗೆ ಗ್ರಾಮದ ಎಲ್ಲಾ ದೇವತೆಗಳಿಗೆ ಉಡಿ ತುಂಬುವ ಕಾರ್ಯ ನಡೆಯುವುದು.

ಸಂಜೆ 07:00 ಯಿಂದ ರಾತ್ರಿ 09.30 ರ ವರೆಗೆ ಹಿರೂರ ಗ್ರಾಮದ ಶ್ರೀ ಚನ್ನಮಲ್ಲಯ್ಯ ಹಿರೇಮಠ ಇವರು ಪ್ರವಚನವನ್ನು ಹೇಳುವರು. ಮಾರ್ಚ್ 14 ಶನಿವಾರ ದಂದು ಸಾಯಂಕಾಲ ಬ್ಯಾಕೋಡ್ ಗ್ರಾಮದ ಬಸನಗೌಡ ನರಸಲಗಿ ಹಾಗೂ ಗ್ರಾಮಸ್ಥರಿಂದ ಅಗ್ನಿ ಪೂಜೆ ಜರಗುವದು.ಸಾಯಂಕಾಲ 08:00 ಗಂಟೆಗೆ ಪ್ರವಚನ ಮಂಗಲ ಗೊಳ್ಳುವುದು.

ನಂತರ ಗ್ರಾಮದ ಕೊಡೇಕಲ್ ಬಸವೇಶ್ವರ ಪಲ್ಲಕ್ಕಿ ಮತ್ತು ಲಕ್ಕಮ್ಮ ದೇವಿ ಪಲ್ಲಕ್ಕಿ, ಹಾಗೂ ಪಡಗಾನೂರು ಗ್ರಾಮದ ಕೆಂಚರಾಯ ಮುತ್ಯಾ ಹಾಗೂ ಲಕ್ಕಮ್ಮ ದೇವಿ ಪಲ್ಲಕ್ಕಿ, ಮತ್ತು ಶ್ರೀಮಠದ ಯಲ್ಲಾ ಲಿಂಗೇಶ್ವರ ಪಲ್ಲಕ್ಕಿಗಳನ್ನು ಗಂಗಾ ಸ್ನಾನ ಮಾಡಿಕೊಂಡು ದೇವಸ್ಥಾನಕ್ಕೆ ಬರ ಮಾಡಿ ಕೊಳ್ಳುವುದು, ಅಂದೆ ರಾತ್ರಿ ನಿಡೋನಿ ಗ್ರಾಮದ ಸುರೇಶ್ ಮಾಸ್ತರ್ ಕುಲಕರ್ಣಿ ಹಾಗೂ ಇವನಗಿ ಗ್ರಾಮದ ಮಾಯಪ್ಪ ಪೂಜಾರಿ ಇವರಿಂದ ಸೂಪ್ರಸಿದ್ಧ ಡೊಳ್ಳಿನ ಪದಗಳು ಜರುಗುವುದು.

ಮಾರ್ಚ್ 15 ರವಿವಾರ ದಂದು ಮುಂಜಾನೆ 07:00 ಗಂಟೆಗೆ ಲಿ. ಶ್ರೀ ಸಿದ್ದಲಿಂಗೇಶ್ವರ ಮತ್ತು ಶ್ರೀ ಯಲ್ಲಾ ಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮಾಡುವುದು.ನಂತರ ಮುಂಜಾನೆ 10:00 ಗಂಟೆಗೆ ಸ್ಥಳೀಯ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಪಂಚ ಪಲ್ಲಕ್ಕಿಗಳಿಗೆ ರುದ್ರಾಭಿಷೇಕ ಮತ್ತು ಮಹಾ ಪೂಜೆ ನಡೆಯುವುದು.

ನಂತರ ತಾಳಿಕೋಟೆಯ ಶ್ರೀ ಸಿದ್ಧಲಿಂಗ ದೇವರ ಸಮ್ಮುಖದಲ್ಲಿ ಶ್ರೀ ಯಲ್ಲಾ ಲಿಂಗ ಮಹಾರಾಜರು ಮತ್ತು ಹಳ್ಳೂರ್ ಗ್ರಾಮದ ತಿಪ್ಪಣ್ಣ ಪೂಜಾರಿಯವರು ಅಗ್ನಿ ಪ್ರವೇಶ ಮಾಡುವರು, ಸಾಯಂಕಾಲ 04:00 ಗೆ ಆಲಕೊಪ್ಪರ ಗ್ರಾಮದಿಂದ ರಥೋತ್ಸವದ ಮಿಣಿ, ಗುಂಡಕರ್ಜಗಿ ಗ್ರಾಮದಿಂದ ಕಳಸ, ಮತ್ತು ಛತ್ರಿ, ಹಾಗೂ ರೂಡಿಗಿ ತಾಂಡಾದಿಂದ ರಥೋತ್ಸವಕ್ಕೆ ಅಲಂಕಾರದ ಹೂವಿನ ಹಾರನ್ನು ಸಕಲವಾದ್ಯಗಳು ಶ್ರೀ ಮಠಕ್ಕೆ ಬರಮಾಡಿ ಕೊಳ್ಳುವುದು.

ನಂತರ ಮಹಾ ರಥೋತ್ಸವ ನಡೆಯುವುದು. ಅಂದೇ ರಾತ್ರಿ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದ ನಾಟ್ಯ ಕಲಾ ತಂಡದಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ಇರುವುದು, ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button