“ನಗು ಮುಖದ ಮಂದಾರ – ಅಪ್ಪು”…..

ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರ್

ಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರ

ಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರ

ಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ

ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರು

ಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರು

ಸನಾದಿ ಅಪ್ಪಣ್ಣನಲಿ ನಟನಾ ಚತುರನಾದರು

ತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದರು

ಕನ್ನಡ ಚಿತ್ರರಂಗಕ್ಕೆ ಹೊಸ ಬೆಳಕಾದವನು

ವಸಂತ ಗೀತೆಯ ಹಾಡಿದ ಮೌರ್ಯನು

ಪಡೆದರು ಬೆಟ್ಟದ ಹೂವಿಗೆ ರಾಷ್ಟ್ರ

ಪ್ರಶಸ್ತಿಯನು

ಯಾರಿವನು ಅಂದವರಿಗೆ ದೊಡ್ಮನೆ

ಮಗನಾದನು

ನಗು ನಗುತಾ ಬಾಳಿದ ಪರಶುರಾಮನು

ಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನು

ಅರ್ಪಿಸಿದರು ವೀರ ಕನ್ನಡಿಗನಿಗೆ ಹಾಲಿನ

ಅಭಿಷೇಕವನು

ಆಕಾಶದೆತ್ತರಕೆ ಬೆಳೆದನು ನಮ್ಮ ಬಸವನು

ಪ್ರತಿ ಸಿನಿಮಾದಲಿ ಅಜಯ್ ಬಾರಿಸಿದನು

ಅಭಿಮಾನಿಗಳ ಪಾಲಿಗೆ ಅಪ್ಪಟ

ಅರಸನಾದವನು

ಪರಮಾತ್ಮನಾಗಿ ಭೂಮಿಗೆ ಬಂದ ರಾಜನು

ಪೃಥ್ವಿಯೇ ಹಾಡಿ ಹೊಗಳಿದ ಮೈತ್ರಿಯ

ರಾಮನು

ನಟನೆಗೆ ಸಾರ್ವಭೌಮನಾದ ಲಕ್ಕಿ ಮ್ಯಾನನು

ಯುವಕರ ಪಾಲಿನ ಆಶಾಕಿರಣ ಯುವರತ್ನನು

ಗಂಧದ ಗುಡಿಗೆ ದೇವರಾಗಿ ಬಂದ

ರಾಜಕುಮಾರನು

ಭೂಮಿಯ ಮೇಲಿನ ನಕ್ಷತ್ರ ಅಂಜನಿ ಪುತ್ರನು

ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)

ಹಿರೇಮಾಗಿಬಾಗಲಕೋಟ

-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button