ಸ್ವಾಮಿ ಅಖಂಡಾನಂದರ ಜೀವ ಶಿವ ಸೇವಾ ಕಾರ್ಯಗಳು ಸದಾ ಸ್ಮರಣೀಯ – ಡಾ, ಭೂಮಿಕ ಅಭಿಪ್ರಾಯ.
ಚಳ್ಳಕೆರೆ ಅ.30




ಶ್ರೀರಾಮಕೃಷ್ಣ ಪರಮಹಂಸರ ನೇರ ಸಂನ್ಯಾಸಿ ಶಿಷ್ಯರಾದ ಸ್ವಾಮಿ ಅಖಂಡಾನಂದರು ಮಾಡಿದ ಜೀವ ಶಿವ ಸೇವೆಯು ಇಂದಿನ ಜನರಿಗೆ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಹಾಗೂ ವೈದ್ಯೆ ಡಾ.ಭೂಮಿಕ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಾರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಸೇವೆಯಿಂದ ಸಾರ್ಥಕತೆ” ಎಂಬ ವಿಷಯವಾಗಿ ಮಾತನಾಡುತ್ತ ಸ್ವಾಮಿ ಅಖಂಡಾನಂದರ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್ ಅವರಿಂದ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಸೌಂದರ್ಯ ಲಹರಿಯ ಶ್ಲೋಕಗಳ ಪಠಣ, ಎಂ ಗೀತಾ ನಾಗರಾಜ್, ತಿಪ್ಪಮ್ಮ ಉಮಾಶಂಕರ್, ಪ್ರಮೀಳಾ ಜಗದೀಶ್, ಪ್ರೇಮಲೀಲಾ ರಾಮಣ್ಣ, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಪ್ರೇಮಾ, ಗೀತಾ ಸುಂದರೇಶ್, ಸರಸ್ವತಿ, ಜಯಮ್ಮ, ದಾಕ್ಷಾಯಣಿ, ಪುಷ್ಪಲತಾ, ಸೌಮ್ಯ ಪ್ರಸಾದ್, ರಾಘವೇಂದ್ರ, ಸುವರ್ಣ, ಶೋಭಾ ರಮೇಶ್, ಶುಭಾ, ಜಾನಕಿ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
