ತಂದೆಯ ಆಶಯ ಅವಿಸ್ಮರಣೆಯವಾಗಿ ವೇದಿಕೆಯಲ್ಲಿ ಶಾಸಕರು ನೆನದು ಭಾವನಾತ್ಮಕವಾಗಿ – ಆನಂದ ಭಾಷ್ಪದಿಂದ ಅರಳಿದ ‘ಹುಣಸೆನಾಡು ಉತ್ಸವ’ ಜರುಗಿತು.
ಕೂಡ್ಲಿಗಿ ನ.24




ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಸೋಮವಾರ ರಂದು ನಡೆದ ದಿವಂಗತ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಸ್ಮರ ಣಾರ್ಥದ ಚಾಲನೆಯಲ್ಲಿರುವ ‘ಹುಣಸೇ ನಾಡು ಉತ್ಸವ-2026’ ವನ್ನು ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ಬರುವ ಶಾಸಕರ ಕಚೇರಿ ಮುಂಭಾಗದಲ್ಲಿ ಅರ್ಥ ಪೂರ್ಣವಾಗಿ ನಡೆಯಿತು.
ಈ ಕಾರ್ಯಕ್ರಮವು ನರಸಿಂಹಗಿರಿ ವಿದ್ಯಾಸಂಸ್ಥೆ, ವಾಲ್ಮೀಕಿ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ವಿಜಯನಗರ ಘಟಕದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು ಉತ್ಸವಕ್ಕೆ ಕೂಡ್ಲಿಗಿಯ ಪರಮ ಪೂಜ್ಯ ಹಿರೇಮಠ ಸಂಸ್ಥಾನದ ಷ.ಬ್ರ, ಪ್ರಶಾಂತ ಸಾಗರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನುಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಅವರು ದುಡಿಯುವ ಕೈಗಳಿಗೆ ಪ್ರೋತ್ಸಾಹ ನೀಡುತ್ತಾ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಾರೆ ಮೂಲಕ ಜನ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆಯವರ ಆದರ್ಶ, ಸಂಸ್ಕಾರ ಮತ್ತು ಮಾರ್ಗದರ್ಶನವನ್ನು ಮೈಗೂಡಿ ಸಿಕೊಂಡು ತಂದೆಗೆ ತಕ್ಕ ಮಗನಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಅವರು, “ನನ್ನ ತಂದೆಯವರ ಒಡನಾಡಿಗಳು ಮತ್ತು ಅಭಿಮಾನಿಗಳನ್ನು ಇಲ್ಲಿ ನೋಡಿದಾಗ ಭಾವನಾತ್ಮಕ ನೆನಪುಗಳು ಮರುಕಳಿಸುತ್ತವೆ. ಪ್ರೀತಿಸಿ ಅಭಿಮಾನಿಸಿದ ಇಷ್ಟೊಂದು ಜನರನ್ನು ಕಂಡು ಏನು ಮಾತನಾಡಬೇಕೆ ಎಂಬುದೇ ಈ ಜನರನ್ನು ನೋಡಿ ಮಾತುಗಳೇ ಬರುತ್ತಿಲ್ಲ” ಎಂದು ಭಾವುಕರಾಗಿ ಸ್ಮರಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಡಾ, ಮೋಹನ್ ಆಳ್ವ ಅವರು ಈ ಉತ್ಸವಕ್ಕೆತಮ್ಮ ಸ್ನೇಹಿತರಾದ ಮಾನ್ಯ ಶಾಸಕರ ತಂದೆಯವರ ನವೆಂಬರ್ 24, 2026 ಈ ಸ್ಮರಣಾರ್ಥ ಹುಣಸೆ ನಾಡು ಉತ್ಸವ-2026 ಕ್ಕೆ ಆಳ್ವಾಸ್ ನುಡಿಸಿರಿ ವಿಧಾನತ್ ಘಟಕ ವಿಜಯನಗರ ಜಿಲ್ಲೆ ಆಳ್ವಾಸ್ ಸಾಂಸ್ಕೃತಿಕಸಹಕಾರ ನೀಡುವುದಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮಾಜಿ ಸಚಿವ ಎನ್.ಎಂ. ನಬಿ ದೊಡ್ಡಮನೆ ಕುಟುಂಬದ ಎನ್.ಟಿ. ಓಬಮ್ಮ, ಎನ್.ಟಿ. ತಮ್ಮಣ್ಣ, ಎಸ್. ವೆಂಕಟೇಶ್, ಎನ್.ವಿ. ಮಂಜುನಾಥ್, ಎನ್.ವಿ. ತಮ್ಮಣ್ಣ, ಬಿಡಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ,ಬಷಿರ್ ವಕೀಲರು, ಗುಡೇಕೋಟೆ ರಾಘವೇಂದ್ರ ರಾವ್, ದೊಡ್ಡ ರಾಮಣ್ಣ, ನಿವೃತ್ತ ಎಸ್ಪಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಟಿ.ಜಿ. ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಬೋಸಯ್ಯ, ಟಿ ಉಮೇಶ್ ದಲಿತ ಮುಖಂಡರು, ನಜೀರ್ ಸಾಬ್,ಸೇರಿದಂತೆ ಹಲವು ಗಣ್ಯರು ಹಾಗೂ ಪ್ರಮುಖರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕಲಾವಿದ ಬಾಳು ಬೆಳಗೊಂದಿ ಅವರು ತಮ್ಮ ಜನಪದ ಹಾಡುಗಳ ಮೂಲಕ ಪ್ರದರ್ಶನವನ್ನು ರಂಜಿಸಿದರು. ದಿವ್ಯ ಆಲೂರು ಹಾಗೂ ವಿರೇಶ್ ಕಣಿಕಲ್ ಮಠ್ ರವರು ಕಾರ್ಯಕ್ರಮ ನಿರೂಪಿಸಿದರು.
ದಿವಂಗತ ಎನ್.ಟಿ. ಬೊಮ್ಮಣ್ಣ ಅವರ ನೆನಪು, ಅವರ ಒಡನಾಡಿಗಳ ಒಡನಾಟ ಹಾಗೂ ಕಲಾ-ಸಾಂಸ್ಕೃತಿಕ ವೈಭವದ ಸಂಗಮವಾಗಿ ಹುಣಸೇನಾಡು ಉತ್ಸವಕ್ಕೆ ನೆರೆದಂತ ಸಾವಿರಾರು ಮಹಿಳೆಯರು, ಯುವಕರು, ಹಿರಿಯರು, ಹಾಗೂ ಪಕ್ಷ ಭೇದ ಮರೆತು ಹಾಗಮಿಸಿದ ತಾಲೂಕಿನ ಅನೇಕ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ಜಿಲ್ಲಾ ವರದಿಗಾರರು: ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ. ಸಾಲುಮನೆ ಕೂಡ್ಲಿಗಿ
