“ತದ್ದು ಮಚ್ಚೆ ಮುಚ್ಚಿಡ ಬೇಡಿ ಮನದಲ್ಲಿ” ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳಿ – ಆರೋಗ್ಯ ನಿರೀಕ್ಷಕರು ಎಸ್.ಎಸ್ ಅಂಗಡಿ.
ಅಮೀನಗಡ ಜ.30

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಸಹಯೋಗದಲ್ಲಿ, ಪ್ರಧಾನ ಮಂತ್ರಿ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕುಷ್ಠ ರೋಗ ನಿರ್ಮೂಲನಾ ದಾಚರಣೆ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪಣ್ಯತಿಥಿ ಹುತಾತ್ಮ ದಿನಾಚರಣೆ ಪ್ರಯುಕ್ತ ಶಾಲಾ ಮುಖ್ಯ ಗುರುಗಳಾದ ಎಮ್.ಎಸ್ ಹರಗಬಲ್ಲ, ಆರೋಗ್ಯ ನೀರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿ, ಶಿಕ್ಷಕರಾದ ಎಮ್.ಎಮ್ ಸಜ್ಜನ, ಗುರುಮಾತೆ ಆರ್.ಎಮ್ ಎಮ್ಮಿ, ಅವರು ಮಹಾತ್ಮಾ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನಗಳು ಸಲ್ಲಿಸುವ ಮುಖಾಂತರ ಕುಷ್ಠ ರೋಗ ನಿರ್ಮೂಲನಾ ದಿನಾಚರಣೆಗೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಕುಷ್ಠ ಈಗ ಕಷ್ಠ ಅಲ್ಲ, ಕುಷ್ಠ ರೋಗವು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗುವುದು, ಕುಷ್ಠ ರೋಗವು “ಮೈಕೊಬ್ಯಾಕ್ಟೇರಿಯಂ ಲಪ್ರೆ” ಸೂಕ್ಷ್ಮ ರೋಗಣಾವಿನಿಂದ ಚರ್ಮ ನರಗಳಿಗೆ ಬಾಧಿತವಾಗುವುದು, ಸ್ಪರ್ಶ ಜ್ಞಾನವಿಲ್ಲದ ತದ್ದು ಮಚ್ಚೆ ಕುಷ್ಠ ರೋಗ ಲಕ್ಷಣಗಳು ಕಂಡು ಬರುತ್ತದೆ.

ನಿರ್ಲಕ್ಷ್ಯ ತೋರುವದರಿಂದ ಅಂಗವಿಕಲತೆ ಉಂಟಾಗುತ್ತದೆ. ಶೀಘ್ರ ಪತ್ತೆ ಚಿಕಿತ್ಸೆ ಯಿಂದ ಅಂಗವಿಕಲತೆ ತಡೆಯ ಬಹುದು, ಸ್ಪರ್ಶ ಕುಷ್ಠ ರೋಗ ಅಭಿಯಾನವು ದಿನಾಂಕ ಜನೇವರಿ 30 ರಿಂದ 13 ಫೆಬ್ರುವರಿ ವರೆಗೆ ಜರಗುವುದು. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಕುಷ್ಠ ರೋಗ ಮುಕ್ತ ಭಾರತ ಗಾಂಧೀಜೀಯವರ ಕನಸು ನೆನಸು ಮಾಡೋಣ, ಕುಷ್ಠ ರೋಗದ ಬಗ್ಗೆ ಸಮೂದಾಯದಲ್ಲಿ ಅರಿವು ಮೂಡಿಸಿ ಕೈ ಕೈ ಜೋಡಿಸಿ ಕುಷ್ಠ ನಿವಾರಿಸೋಣ ಎಂದು ಕುಷ್ಠ ರೋಗ ನಿರ್ಮೂಲನಾ ನಮ್ಮ ಗುರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಹುತಾತ್ಮ ದಿನಾಚರಣೆ, ಕಷ್ಠ ರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಗುರು ವೃಂದ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಶಾಲಾ ಮುದ್ದು ಮಕ್ಕಳು ಭಾಗವಹಿಸಿ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.
