ಇ.ಓ ಪ್ರಭಾವಕ್ಕೆ ಮಣಿಯುತ್ತಾ ಜಿಲ್ಲಾಡಳಿತ? ರಾಷ್ಟ್ರ ಕ್ರಾಂತಿ ನ್ಯೂಸ್ ಸದ್ದು ಮಾಡಿದ್ರೂ – ಅಧಿಕಾರಿಗೆ ನಡುಕವೇ ಇಲ್ವಾ..?
ರೋಣ ಜ.31

ಪೂರ್ವಾಗ್ರಹಣಗೆ ಪೀಡಿತನಾದ ಕೊಳಕು ಮನಸ್ಥಿನ ಗೋಮುಖ ವ್ಯಾಘ್ರ…..
ದೇಶವೇ ಭಕ್ತಿಯಿಂದ 77 ನೇ. ಗಣರಾಜ್ಯೋತ್ಸವ ಆಚರಿಸುತ್ತಿದ್ದರೆ. ರೋಣ ತಾಲೂಕು ಪಂಚಾಯಿತಿ ಇ.ಓ ಚಂದ್ರಶೇಖರ ಕಂದಕೂರು ಮಾತ್ರ ಸರ್ಕಾರದ ಆದೇಶವನ್ನೇ ಕಸದ ಬುಟ್ಟಿಗೆ ಎಸೆದು ತಮ್ಮ ಅಹಂಕಾರ ಪ್ರದರ್ಶಿಸಿದ್ದಾರೆ. ರಾಷ್ಟ್ರಧ್ವಜದ ಮುಂದೆ ಕಪ್ಪು ಶರ್ಟ್ ಧರಿಸಿ ಶಿಷ್ಟಾಚಾರ ಉಲ್ಲಂಘಿಸಿದ ಈ ಅಧಿಕಾರಿಯ ಕರಾಮತ್ತನ್ನು ರಾಷ್ಟ್ರ ಕ್ರಾಂತಿ ನ್ಯೂಸ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರೂ, ಈವರೆಗೂ ಇವರ ಮೇಲೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ಮೌನ ಯಾಕೇ ಹೀಗೆ ಹತ್ತಾರು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಬಾಕ್ಸ್ ನ್ಯೂಸ್:-
ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶದ ನೋಟೀಸ್
ನಿಯಮ ಇರುವುದು ಬಡವರಿಗಾ? ಈ ಅಧಿಕಾರಿಗೆ ಅನ್ವಯಿಸಲ್ವಾ..?ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಆದೇಶದಲ್ಲಿ (ಸಂ: ಮುಕಾ: 1178719/2026), ರಾಷ್ಟ್ರೀಯ ಹಬ್ಬಗಳಲ್ಲಿ ಅಧಿಕಾರಿಗಳು ಬಿಳಿ ಅಥವಾ ಸಭ್ಯ ಉಡುಪು ಧರಿಸುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಎಲ್ಲಾ ಅಧಿಕಾರಿಗಳು ಬಿಳಿ ಉಡುಪಿನಲ್ಲಿ ಗಾಂಭೀರ್ಯ ಮೆರೆಯುತ್ತಿದ್ದರೆ, ಕಂದಕೂರು ಮಾತ್ರ ಕಪ್ಪು ಶರ್ಟ್ ಧರಿಸಿ ಧ್ವಜಕ್ಕೆ ವಂದಿಸಿರುವುದು ಇಡೀ ವ್ಯವಸ್ಥೆಗೆ ಮಾಡಿದ ಅಪಮಾನ. ಇದು ಅಜಾಗರೂ ಕತೆಯಲ್ಲ, ಬದಲಾಗಿ ವ್ಯವಸ್ಥೆಯ ವಿರುದ್ಧದ ಉದ್ದಟತನ ಎಂಬ ಮಾತುಗಳು ಕೇಳಿ ಬರುತ್ತಿವೆ.ರಾಷ್ಟ್ರ ಕ್ರಾಂತಿ ನ್ಯೂಸ್ ವರದಿಯ ನಂತರವೂ ಮೌನವೇಕೆ?ಈ ಅಕ್ಷಮ್ಯ ಅಪರಾಧದ ಬಗ್ಗೆ ರಾಷ್ಟ್ರ ಕ್ರಾಂತಿ ನ್ಯೂಸ್ ಧ್ವನಿ ಎತ್ತಿ, ಅಧಿಕಾರಿಯ ಅಸಲಿ ಮುಖವಾಡ ಕಳಚಿದೆ.

ಸರ್ಕಾರದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದರು. ಎದುರು ಇರುವ ಶಾಸಕರು. ಶಾಸನ ಮಾಡುವ ಸರ್ಕಾರಕ್ಕೆ ಏನು ಕಿಮ್ಮತ್ತು ಅಂತಾ ಸಾರ್ವಜನಿಕ ವಲಯಗಳಲ್ಲಿ ಪಿಸುಗುಟ್ಟಿದರು. ಮೌನಕ್ಕೆ ಶರಣಾದ ಜಿಲ್ಲಾಡಳಿತಕ್ಕೆ ಶಭಾಷ್ ಹೇಳಲೇ ಬೇಕು…..
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಇಡೀ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದ್ದರೂ, ಜಿಲ್ಲಾಧಿಕಾರಿಗಳು ಈ ಇ.ಓ ಮೇಲೆ ಶಿಸ್ತು ಕ್ರಮ ಜರುಗಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಪ್ಪು ಮಾಡಿದ ಅಧಿಕಾರಿಗೆ ರಾಜಕೀಯ ಶ್ರೀರಕ್ಷೆ ಇದೆಯೇ? ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಅಶಿಸ್ತನ್ನು ಬೆಂಬಲಿಸುತ್ತಿದ್ದಾರೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪ್ರತಿಭಟನೆಯ ಸಂಕೇತವೋ ಅಥವಾ ಸಂವಿಧಾನದ ಮೇಲಿನ ನಿರ್ಲಕ್ಷ್ಯವೋ..? ಕಪ್ಪು ಬಣ್ಣ ಪ್ರತಿಭಟನೆಯ ಸಂಕೇತ. ಗಣರಾಜ್ಯೋತ್ಸವ ದಂದೇ ಇಂತಹ ಬಣ್ಣದ ಉಡುಪು ಧರಿಸಿ ಬರುವುದು ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವದ ಹಬ್ಬಕ್ಕೆ ನೀಡುವ ಯಾವ ರೀತಿಯ ಗೌರವ? ಇಂತಹ ಉದ್ಧಟತನದ ಅಧಿಕಾರಿಗಳು ಪವಿತ್ರ ವೇದಿಕೆಯ ಮೇಲಿದ್ದರೆ ಜನ ಸಾಮಾನ್ಯರಿಗೆ ಕಾನೂನಿನ ಮೇಲೆ ನಂಬಿಕೆ ಉಳಿಯಲು ಹೇಗೆ ಸಾಧ್ಯ..?
ಸಾರ್ವಜನಿಕರ ಆಗ್ರಹ:-
ರಾಷ್ಟ್ರ ಕ್ರಾಂತಿ ನ್ಯೂಸ್ ಬಿತ್ತರಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಈ ಅಧಿಕಾರಿಯನ್ನು ಅಮಾನತ್ ಗೊಳಿಸಬೇಕು ಅಥವಾ ಕನಿಷ್ಠ ಪಕ್ಷ ಕಾರಣ ಕೇಳಿ ನೋಟಿಸ್ ಆದರೂ ನೀಡಬೇಕು. ಇಲ್ಲವಾದಲ್ಲಿ ಸಂವಿಧಾನದ ಹಬ್ಬದ ದಿನ ದಂದೇ ಶಿಷ್ಟಾಚಾರ ಉಲ್ಲಂಘಿಸಿದ ಈ ಅಧಿಕಾರಿಗಳಿಗೆ ಮುಂದೆ ಕಾನೂನಿನ ಭಯವೇ ಇಲ್ಲದಂತಾಗುತ್ತದೆ. ರಾಷ್ಟ್ರ ಕ್ರಾಂತಿ ನ್ಯೂಸ್ ವರದಿಯನ್ನೇ ಆಧಾರವಾಗಿಟ್ಟು ಕೊಂಡು ಜಿಲ್ಲಾಧಿಕಾರಿಗಳು ಈ ಕೂಡಲೇ ಇ.ಓ ಚಂದ್ರಶೇಖರ ಕಂದಕೂರು ಅವರಿಗೆ ಶೋಕಾಸ್ ನೋಟಿಸ್ ನೀಡಬೇಕು ಎಂದು ಸಾರ್ವಜನಿಕರ ಬಲವಾದ ಆಗ್ರಹವಾಗಿದೆ.
