ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ – ಚಿತ್ರೀಕರಣ ಮುಕ್ತಾಯ.
ಬೆಂಗಳೂರು ಅ.18




ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಸ್. ಪಂಚಾಕ್ಷರಯ್ಯ, ಯಶಸ್, ಚಿದಾನಂದಪ್ಪ ಕನಕಗಿರಿ, ಮರಿಸ್ವಾಮಿ ಹಾಗೂ ಅಹಿನಾ ಮನೋ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ‘ಚಂದ್ರಗಿರಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣ ಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಶ್ರೀ ಗಡದಮ್ಮ ತಾಯಿ ಸನ್ನಿಧಾನದಲ್ಲಿ ಈ ಹಿಂದೆ ‘ಮಾಯಾವಿ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ನಟ ರಘುರಾಮ್ ಅಭಿನಯದಲ್ಲಿ ಮೂಡಿಬಂದ ‘ನನ್ನದು ನಮ್ಮದು ಎಲ್ಲಾ ಸುಳ್ಳು, ಅರಿಯೋ ನೀ ಮೊದಲು…’ ಎಂಬ ವಿಶೇಷ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರ ತಂಡ ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಅಧಿಕೃತವಾಗಿ ತೆರೆ ಎಳೆದಿದೆ.
ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಅವರೇ ಸಂಗೀತ ಸಂಯೋಜಿಸಿ, ನೃತ್ಯ ನಿರ್ದೇಶನವನ್ನೂ ಮಾಡಿದ್ದು, ವಿಭಿನ್ನ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿರುವ ‘ಚಂದ್ರಗಿರಿ’ ಚಿತ್ರವು ಭಯಾನಕ ಸನ್ನಿವೇಶಗಳು, ಕುತೂಹಲಕಾರಿ ತಿರುವುಗಳು, ರೋಚಕ ಘಟನಾವಳಿ ಗಳನ್ನೊಳಗೊಂಡ ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿದೆ.

ಚಿತ್ರದಲ್ಲಿ ಹಿರಿಯ ನಟ ಶೋಭರಾಜ್, ಪಂಚಾಕ್ಷರಯ್ಯ, ಯಶಸ್, ಮರಿಸ್ವಾಮಿ, ಶಿಲ್ಪಾ ಶ್ರೀನಿವಾಸ್, ಉಗ್ರಂ ರವಿ, ಬಲರಾಮ್ ಪಾಂಚಾಳ್, ಕಿಶೋರ್ ಕಾಸರಗೋಡು, ರಘುರಾಮ್, ರೂಪಶ್ರೀ, ನಂದಿನಿ ಕಮ್ಮಯ್ಯ, ಶಶಿರೇಖ, ಮಾಸ್ಟರ್ ವೀರಧನುಷ್ ಸೇರಿದಂತೆ ಪ್ರಮುಖ ಕಲಾವಿದರಿದ್ದಾರೆ.
ಬಹುಮುಖ ಪ್ರತಿಭೆ ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದಲ್ಲದೆ, ಸಂಗೀತ ಸಂಯೋಜನೆ, ನೃತ್ಯ ನಿರ್ದೇಶನ ಕೂಡ ಮಾಡಿದ್ದಾರೆ.
ಗುರುದತ್ ಮುಸರಿ ಛಾಯಾಗ್ರಹಣ, ಯುವರಾಜ್ ಬಿ. ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ದೇವು ಕೆ.ಅಂಬಿಗ ಗೀತ ಸಾಹಿತ್ಯ, ಎಂ.ಜಿ.ಕ್ಲೇಶ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ವಿ.ಎಂ.ಎಸ್.ಗೋಪಿ ಪಿ.ಆರ್.ಓ ಆಗಿದ್ದು, ಮಲ್ಲಿ ಕೆ. ವಡ್ಡರಹಟ್ಟಿ ಸಹ ನಿರ್ದೇಶನವಿದೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿರುವ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಸಿದ್ದು.

ಇದೆ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಗೆ ತರಲು ಯೋಜನೆ ರೂಪಿಸಿದೆ. ವಿಭಿನ್ನ ಕಥಾವಸ್ತು, ಅನುಭವಿ ಕಲಾವಿದರ ಅಭಿನಯ, ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಮೂಡಿ ಬರುತ್ತಿರುವ ‘ಚಂದ್ರಗಿರಿ’ ಚಿತ್ರವು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ನಿರೀಕ್ಷೆಯನ್ನು ಚಿತ್ರ ತಂಡ ಹೊಂದಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
