ಪ್ರಜಾ ಸೌಧ ಶಂಕು ಸ್ಥಾಪನೆ ಮಾಡುತ್ತೇನೆ – ಜಿ.ಎಚ್ ಶ್ರೀನಿವಾಸ್.

ಅಜ್ಜಂಪುರ ಅ.18

ಗಾಳಿ ಯಂತ್ರದ ಮೂಲಕ ವಿದ್ಯುತ್ ತಯಾರಿಸಲು ಬುಕ್ಕಂಬೂದಿಯಲ್ಲಿ ಸಿದ್ಧತೆ ಮಾಡಿಸುತ್ತಿದ್ದೇನೆ ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು.

ಅವರು ಶನಿವಾರ ಅಜ್ಜಂಪುರದಲ್ಲಿ ಲೋಕಪಯೋಗಿ ಇಲಾಖೆ ಏರ್ಪಡಿಸಿದ್ದ ಪಟ್ಟಣದ ಗಾಂಧಿ ವಿರುದ್ಧ ದಿಂದ ರೈಲ್ವೆ ಮೇಲು ಸೇತುವೆಯ ರಸ್ತೆ ಅಗಲೀಕರಣಕ್ಕೆ 250 ಲಕ್ಷಗಳ ರೂ ಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿಯ ಎಲ್ಲಾ ವಾರ್ಡುಗಳಿಗೂ ಅಭಿವೃದ್ಧಿ ಕಾಮಗಾರಿ ಮಾಡಲು ಹಣ ಕೊಡುತ್ತೇನೆ ಮತ್ತು ಮನೆ ಮನೆಗೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸುತ್ತೇನೆ, ಮತ್ತು ಪ್ರಜಾ ಸೌಧ ನಿರ್ಮಾಣಕ್ಕೆ ಶೀಘ್ರದಲ್ಲಿ ಶಂಕು ಸ್ಥಾಪನೆ ಮಾಡಲಿದ್ದೇನೆ.

ಮತ್ತು ಈಗಾಗಲೇ ಭದ್ರಾ ನದಿಯಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದ್ದೇನೆ, ಬುಕ್ಕಂಬೂದಿ ರಸ್ತೆಗೆ ಎರಡು ಕೋಟಿ ಹಣ ಮಂಜೂರು ಮಾಡಲಾಗಿದೆ, ಶಬರಿಗಿರಿ ನಗರದಲ್ಲಿ 45 ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಮತ್ತು ಅಂಬೇಡ್ಕರ್ ನಗರದಲ್ಲಿ 40 ಲಕ್ಷ ರೂ ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದು ಹೇಳಿದರು.

ಮುಂಬರುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಎಲ್ಲರೂ ಬೆಂಬಲಿಸ ಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇವಣ್ಣ ಮಾಜಿ ಅಧ್ಯಕ್ಷರಾದ ನಟರಾಜ್ ಮಾತನಾಡಿದರು ಸದಸ್ಯರಾದ ಅಣ್ಣಪ್ಪ ಕವಿತಾ ಕೇಶವ್ ಮೂರ್ತಿ, ಸುಮಲತಾ ಮಲ್ಲಿಕಾರ್ಜುನ್,ನಿಸಾರ್ ಅಹ್ಮದ್, ಜೋಗಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದು ಮುಖ್ಯ ಅಧಿಕಾರಿ ರಮೇಶ್ ಸ್ವಾಗತಿಸಿ ವಂದಿಸಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button