ತಾಲೂಕಿನ ಮಳೆಯಿಂದ ಹಾನಿಯಾದ ರೈತರಿಗೆ ಪರಿಹಾರ ಸರ್ಕಾರಕ್ಕೆ – ಮನವಿ ಮಾಡಿಕೊಂಡ ಶಾಸಕರು.
ಮೊಳಕಾಲ್ಮುರು ಅ.22

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಾರಿ ಮಳೆಯಿಂದ ರೈತರು ಬೆಳೆದಂತ ಫಸಲು ಕೈಗೆ ಬಾರದೆ ಸಂಕಷ್ಟದಲ್ಲಿ ಇದ್ದಾರೆ ಈ ವರ್ಷ ಅಕ್ಟೋಬರ್ ನವಂಬರ್ ತಿಂಗಳಲ್ಲಿ ಬೆಳೆ ಫಸಲು ಕೈಗೆ ತೆಗೆದು ಕೊಳ್ಳುತ್ತಿದ್ದಂತೆ ಭಾರಿ ಮಳೆಯಿಂದಾಗಿ ಹಳ್ಳ ಕೆರೆಗಳು ಕಟ್ಟೆಗಳು ಸರೋವರಗಳು ತುಂಬಿ ಮೈದುಂಬಿ ಹರಿಯುತ್ತಿದ್ದು ರೈತರ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆದಂತ ಫಸಲು ಪೂರ್ತಿ ಸರ್ವನಾಶ ಮಾಡಿದೆ ಎಂದು ಮೊಳಕಾಲ್ಮೂರು ತಾಲೂಕಿನ ರೈತರು ಅಳಲನ್ನು ತೋಡಿ ಕೊಂಡಿದ್ದಾರೆ ಈ ವಿಷಯ ರೈತರು ಶಾಸಕರ ಹತ್ತಿರ ಹೇಳಿ ಕೊಂಡಾಗ ಕೂಡಲೇ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ರೈತರ ಕಷ್ಟಗಳನ್ನು ಆಲಿಸಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ತಿಳಿಸಿ ಭೂಮಿಯನ್ನು ನಂಬಿ ಕೆಲಸ ಮಾಡುತ್ತಿರುವ ರೈತರಿಗೆ ಸರ್ಕಾರದ ಪರಿಹಾರವನ್ನು ರೈತರಿಗೆ ಒದಗಿಸಿ ಕೊಡ ಬೇಕೆಂದು ಮತ್ತು ರೈತರು ಕಟ್ಟಿದಂತಹ ಬೆಳೆಗಳಿಗೆ ಇನ್ಸೂರೆನ್ಸ್ ಕೂಡ ರೈತರಿಗೆ ಮಂಜೂರು ಮಾಡಿಸಿ ಕೊಡ ಬೇಕೆಂದು ಶಾಸಕರು ಆಸರೆ ಯಾಗಿದ್ದಾರೆ ಮತ್ತು ರಂಗಯ್ಯನದುರ್ಗ ಜಲಾಶಯ ತುಂಬಿ ಭರ್ತಿಯಾಗಿ ಐದು ಗೇಟುಗಳನ್ನು ಎತ್ತಿ ನೀರನ್ನು ಹೊರಗಡೆ ಬಿಟ್ಟಿದ್ದಾರೆ ಆದರೆ ಪಕ್ಕದ ರೈತರು ಜಮೀನುಗಳಿಗೆ ನೀರು ನುಗ್ಗಿ ರೈತರು ಬೆಳೆದಂತ ಬೆಳೆಗಳೆಲ್ಲ ನೀರು ಪಾಲಾಗಿ ಸಂಕಷ್ಟದಲ್ಲಿದ್ದಾರೆ ಇದನ್ನು ಅರಿತ ಶಾಸಕರು ಮನಗೊಂಡು ರೈತರಿಗೆ ಸರ್ಕಾರದ ಪರಿಹಾರವನ್ನು ಒದಗಿಸಿ ಕೊಡುತ್ತೇನೆ ಎಂದು ಶಾಸಕರ ಉದ್ದೇಶವಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು