ಬೈಕ್ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಗುದ್ದಿ ಸವಾರ ಹಾಗೂ ಬಾಲಕಿಗೆ ತೀವ್ರ ಪೆಟ್ಟು.
ಕೊಟ್ಟೂರು ಸಪ್ಟೆಂಬರ್.14

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಹನುಮನಹಳ್ಳಿ ಗ್ರಾಮದ ಬಳಿ ಸರ್ಕಾರಿ ಬಸ್ಸಿಗೊಂದು ಬೈಕ್ ಡಿಕ್ಕಿ ಹೊಡೆದು ಕೊಟ್ಟೂರಿನ ಜ್ಯೋತಿ ಮತ್ತು ಕಾರ್ತಿಕ್ ತೀವ್ರ ಗಾಯಗೊಂಡಿದ್ದಾರೆ.ಕೊಟ್ಟೂರಿನಿಂದ ಅಮಾವಾಸ್ಯೆ ಪ್ರಯುಕ್ತ ಅಗಸನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದು ಇಂದು ಬೆಳಗ್ಗೆ 8-45ಕ್ಕೆ ಈ ಘಟನೆ ಸಂಭವಿಸಿದೆ.
ಹನುಮನಹಳ್ಳಿ ಗ್ರಾಮದ ಬಳಿ ಬೈಕ್ ಸವಾರನು ತಿರುವಿನಲ್ಲಿ ಬಸ್ಸಿಗೆ ಡಿಕ್ಕಿ ಹೊಡೆದು ತೀರ್ವ ಗಾಯಗೊಂಡಿದ್ದಾರೆ ಸರ್ಕಾರಿ ಬಸ್ಸಿನ ಚಾಲಕ ನಾಗಭೂಷಣ್ ಮತ್ತು ಹನುಮನಹಳ್ಳಿ ಗ್ರಾಮಸ್ಥರು ಅಂಬುಲೆನ್ಸ್ ಕರೆಸಿ ಕಳುಹಿಸಿಕೊಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು