ಕಳ್ಳನನ್ನು ಹಿಡಿದು ಪೊಲೀಸರಿಗೆ – ಒಪ್ಪಿಸಿದ ಗ್ರಾಮಸ್ಥರು.
ಇಂಡಿ ಫೆ .09

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು ಇದರಿಂದ ಸಾರ್ವಜನಿಕರಿಗೆ ನಿದ್ರೆ ಗೆಡಿಸಿದಂತಾಗಿದೆ. ಆದರೂ ಪೊಲೀಸ್ ಅಧಿಕಾರಿಗಳು ಅನೇಕ ಕಳ್ಳರನ್ನು ಹಿಡಿದು ಅವರ ಹೆಡೆಮುರಿ ಕಟ್ಟಿದ್ದು ಉಂಟು. ಆದರೆ ಅನೇಕ ಕಡೆ ಇನ್ನೂ ಕಳ್ಳರ ಹಾವಳಿ ತಪ್ಪಿಲ್ಲ. ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಬೇಕರಿ ಅಂಗಡಿ, ಕಿರಾಣಿ ಅಂಗಡಿ ಕಳ್ಳತನವಾಗಿದ್ದವು.
ಆದರೆ ಇಂದು ದಿನಾಂಕ 09-02-2025 ರ ಬೆಳಿಗ್ಗೆ 3 ಘಂಟೆ ಸುಮಾರಿಗೆ ನಾದ ಕೆಡಿ ಗ್ರಾಮದ “ಲಿಂಗಾಯತ ಖಾನಾವಳಿ” ಅವರ ತೋಟದ ವಸ್ತಿಗೆ ವಿಜಯಪುರದ ಬಾಬಾ ನಗರದ ನಾಗರಾಜ್ ಎಂಬ ಕಳ್ಳನು ರಾತ್ರಿ ಸಮಯದಲ್ಲಿ ಮನೆಗೆ ಲಗ್ಗೆ ಹಾಕಿದಾಗ ಸಿಕ್ಕಿ ಬಿದ್ದಿದ್ದಾನೆ. ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆ ಕಳ್ಳನನ್ನು ವಿಚಾರಿಸಿದಾಗ ಸತ್ಯ ಹೊರ ಬಿದ್ದಿದೆ. ತಕ್ಷಣ ಗ್ರಾಮಸ್ಥರು ಗ್ರಾಮೀಣ ಪೊಲೀಸ್ ಠಾಣೆಗೆ ತಿಳಿಸಿದಾಗ. ಪೊಲೀಸ್ ಅಧಿಕಾರಿಗಳು ಆ ಕಳ್ಳನನ್ನು ವಿಚಾರಣೆಗಾಗಿ ಠಾಣೆಗೆ ತೆಗೆದು ಕೊಂಡು ಹೋದ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಶಿವಾನಂದ.ಬಿ ಹರಿಜನ.ಇಂಡಿ