ಉಜ್ಜಿನಿ ಸರ್ಕಾರಿ ಆಸ್ಪತ್ರೆ ಹತ್ತಿರ ಕಾರು ಪಲ್ಟಿಯಾಗಿ ಗುಂಡಿಯಲ್ಲಿ ಬಿದ್ದು ಪ್ರಕಾಶ್ ಸಾವು
ಉಜ್ಜಿನಿ ಸಪ್ಟೆಂಬರ್.10

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಸರ್ಕಾರಿ ಆಸ್ಪತ್ರೆ ಹತ್ತಿರ ಕಾರು ಪಲ್ಟಿಯಾಗಿ ಗುಂಡಿಯಲ್ಲಿ ಬಿದ್ದು ಪ್ರಕಾಶ್ ಶಿಕ್ಷಕರು ಮೃತಪಟ್ಟಿದ್ದಾರೆ. ಹೊಸಕೆರೆಯಿಂದ ಕೊಟ್ಟೂರಿಗೆ ಹೋಗುವಾಗ ಉಜ್ಜಿನಿ ಸರ್ಕಾರಿ ಆಸ್ಪತ್ರೆ ಹತ್ತಿರ ನಾಯಿ ಒಂದು ಅಡ್ಡ ಬಂದು ಕಾರು ಪಲ್ಟಿಯಾಗಿದೆ ಕಾರಿನಲ್ಲಿರುವ ಶ್ರೀ ಕೊಟ್ಟೂರೇಶ್ವರ ಪ್ರೌಢ ಶಾಲೆಯ ಪ್ರಕಾಶ್ ಹಿಂದಿ ಶಿಕ್ಷಕರು ಕಾರು ಚಾಲನೆ ಮಾಡುತ್ತಿದ್ದರು.
ಮತ್ತು ತಂದೆ ತಾಯಿ ಇಬ್ಬರು ಇದ್ದರು.ಇದರಲ್ಲಿ ಪ್ರಕಾಶ್ ಹಿಂದಿ ಶಿಕ್ಷಕರು ಮೃತಪಟ್ಟಿದ್ದಾರೆ ಹಾಗೂ ಪಕ್ಕದಲ್ಲಿರುವ ಜೆಸಿಬಿ ಒಂದರಿಂದ ಕಾರು ಮೇಲಕ್ಕೆತ್ತಿ ತಕ್ಷಣವೇ ಅಲ್ಲಿನ ಸಾರ್ವಜನಿಕರು ತಂದೆ ತಾಯಿ ಬದುಕಲು ಸಹಾಯ ಮಾಡಿದರು ಆದರೆ ಕಾರು ಚಾಲನೆ ಮಾಡಿದ ಪ್ರಕಾಶ್ ಹಿಂದಿ ಶಿಕ್ಷಕರು ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಕೊಟ್ಟೂರು ತಾಲೂಕ ಕಾರ್ಯದರ್ಶಿಯಾಗಿದ್ದರು ಅವರನ್ನು ಬದುಕ್ಷಿಸಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು