ಆರೋಗ್ಯವಂತ ಸಮಾಜ ನಮ್ಮ ಆದ್ಯತೆಯಾಗಲಿ – ಹೂಲಗೇರಿ.
ಹುನಗುಂದ ಜನೇವರಿ.16

ಆರೋಗ್ಯವಂತ ದೇಹ ಮತ್ತು ಮನಸ್ಸುಗಳೆರಡೂ ಸದೃಢ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ದುರ್ವೆಸನ ಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿ ಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗ ಬೇಕಾಗಿದೆ ಎಂದು ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟೀಯ ಯುವದಿನ ಮತ್ತು ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಗುಲಾಬಿ ಆಂದೋಲನ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುವದು ನಮ್ಮೆಲ್ಲರ ವೈಯಕ್ತಿಕ ಜವಾಬ್ದಾರಿಯಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ, ಕ್ಷಣಿಕ ಸುಖ ನೀಡುವ ವ್ಯಸನಗಳಾದ ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಮುಂತಾದವುಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿ ಕೊಂಡು ಮಾನವ ಸಂಪನ್ಮೂಲ ವಾಗಬೇಕೆಂದರು. ಕಾಲೇಜಿನ ವಿದ್ಯಾಥಿಗಳು ಮತ್ತು ಸಿಬ್ಬಂದಿ ಜಾಥಾ ಮೂಲಕ ಕಾಲೇಜಿನ ಸುತ್ತ ಮುತ್ತ ಇರುವ ಅಂಗಡಿಗಳಿಗೆ ತೆರಳಿ ಅಂಗಡಿಯ ಮಾಲಕರಿಗೆ ಗುಲಾಬಿ ಹೂ ನೀಡಿ ಅವರಿಗೆ ತಂಬಾಕು ವಸ್ತು ಸೇವನೆ ಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವುದಲ್ಲದೇ ತಂಬಾಕು ವಸ್ತುಗಳನ್ನು ಮಾರದಂತೆ ಮನ ವೊಲಿಸಲಾಯಿತು. ರಾಷ್ಟೀಯ ಯುವದಿನದ ಸಂದರ್ಭದಲ್ಲಿ ವಿವೇಕಾನಂದರ ಬದುಕು ಮತ್ತು ಅವರ ಆದರ್ಶಗಳ ಕುರಿತಾಗಿ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಮಾತನಾಡಿದರು. ಕಾಲೇಜಿನ ಸಿಬ್ಬಂದಿ ಹಾಜರಿದ್ದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಎನ್.ವಾಯ್.ನದಾಫ್ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ವಿ,ಕೆ.ಶಶಿಮಠ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ