ಕೊಟ್ಟೂರು ಆರೋಗ್ಯ ಕೇಂದ್ರದಲ್ಲಿ — ವೈದ್ಯರು ಇಲ್ಲದೆ ರೋಗಿಗಳು ಪರದಾಡುವ ಪರಸ್ಥಿತಿ.
ಕೊಟ್ಟೂರು ಆಗಷ್ಟ.7

ರೋಗಿಗಳು ಗಂಟೆಗಟ್ಟಲೇ ಕಾಯಬೇಕು ಏಕೆಂದರೆ ಆಸ್ಪತ್ರೆಯಲ್ಲಿರುವ ಬೆರಳಣಿಕೆಯಷ್ಟು ವೈದ್ಯರುಕೊಟ್ಟೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಪ್ರಮುಖ ಪಾತ್ರವಹಿಸಿದೆ. ಆದರೆ ತಜ್ಞ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಗಂಟೆಗಟ್ಟಲೇ ಕಾಯಬೇಕು: ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತು ತಪಾಸಣೆಗೊಳಗಾಗಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಆಸ್ಪತ್ರೆಯಲ್ಲಿರುವ ಬೆರಳಣಿಕೆಯಷ್ಟು ವೈದ್ಯರು ವಾರ್ಡ್‌ಗಳಲ್ಲಿ ದಾಖಲಾಗುವ ಒಳರೋಗಿಗಳನ್ನು ನೋಡಿ ಒಪಿಡಿಗೆ ಬರುವವರೆಗೂ ಹೊರ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಿದೆ.ಪ್ರತಿ ಗುರುವಾರ ನೂರಾರು ಗರ್ಭಿಣಿಯರು ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಪ್ರಸೂತಿ ತಜ್ಞರೇ ತಾತ್ಕಾಲಿಕ ಮಾತ್ರ ಇರುವುದು. ಸ್ಟಾಫ್ ನರ್ಸ್‌ಗಳ ಕೊರತೆಯೂ ಇದೆ. ಅಲ್ಲದೆ, ತಾಯಿ ಕಾರ್ಡ್ ವಿತರಣೆಯೂ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ರಾತ್ರಿ ವೇಳೆ ಕೇಳುವವರಿಲ್ಲ: ರಾತ್ರಿ ಸಂದರ್ಭದಲ್ಲಿ ಏನಾದರೂ ತುರ್ತು ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ಬಂದರೆ ಇಲ್ಲಿ ಕೇಳುವವರು ಯಾರು ಇಲ್ಲ.

ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಮಾದರಿ ಆಸ್ಪತ್ರೆಯಾಗುವ ಆರ್ಹತೆ ಇರುವ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಸಿಬ್ಬಂದಿ ಕೊರತೆಯಿಂದಾಗಿ ಅನಾರೋಗ್ಯ ಪೀಡಿತವಾಗಿದೆ.ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗವಿದೆ. ಹೆರಿಗೆ ಥೇಟರ್, ಟ್ರಾಮ್ ಸೆಂಟರ್ (ಅಪಘಾತ), ಪ್ರಯೋಗಾಲಯ, ಕಣ್ಣಿನ ಪರೀಕ್ಷಾ ವಿಭಾಗ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇಲ್ಲಿವೆ.ಆದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಬೆರಳೆಣಿಕೆಯ ವೈದ್ಯರಷ್ಟೇ ,ವೈದ್ಯರ ಕೊರತೆ. ಎದ್ದು ಕಾಣುತ್ತದೆ. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಜನರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.ಕೊಟ್ಟೂರು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳು ಸೇರಿರುವುದರಿಂದ ನಿತ್ಯವೂ ಇಲ್ಲಿ ರೋಗಿಗಳ ಜಾತ್ರೆಯೇ ನೆರೆದಿರುತ್ತದೆ.ಶಾಸಕ ಕೆ. ನೇಮಿರಾಜ್ ನಾಯ್ಕ ಖುದ್ದು ಆಸ್ಪತ್ರೆ ಪರಿಶೀಲಿಸಿದ್ದಾರೆ. ಇಲ್ಲಿನ ಸಮಸ್ಯೆಗಳು ಗೊತ್ತಿವೆ. ಆದರೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಬದಲಾಗುತ್ತಿಲ್ಲ. ನಮ್ಮ ಕ್ಲೀನಿಕ್ ಉದ್ಘಾಟನಾ ಸಮಯದಲ್ಲಿ ಮೇಲಧಿಕಾರಿಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು